ಮನೋರಂಜನೆ

ರಾಜ್ಯಸಭೆಗೆ ಅನುಪಮ್ ಖೇರ್ ನಾಮನಿರ್ದೇಶನ ಬೇಡ: ಕಾಶ್ಮೀರಿ ಪಂಡಿತರ ಒತ್ತಾಯ….ಯಾಕೆ ಇರಬಹುದು….! ಮುಂದೆ ಓದಿ…

Pinterest LinkedIn Tumblr

anupam1

ನವದೆಹಲಿ: ರಾಜ್ಯಸಭೆಗೆ ನಟ ಅನುಪಮ್ ಖೇರ್ ಅವರನ್ನು 7 ನೇ ಅಭ್ಯರ್ಥಿಯನ್ನಾಗಿ ನಾಮ ನಿರ್ದೇಶನ ಮಾಡಲಾಗುತ್ತದೆ ಎಂಬ ವಿಷಯ ಎಲ್ಲೆಡೆ ಕೇಳಿ ಬರುತ್ತಿದೆ.

ಆದರೆ ಅನುಪಮ್ ಖೇರ್ ಅವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನಗೊಳಿಸುವುದು ಕಾಶ್ಮೀರ ಪಂಡಿತರಿಗೆ ಸುತಾರಾಂ ಇಷ್ಟವಿಲ್ಲ. ಅನುಪಮ್ ಖೇರ್ ಹೆಸರು ಕೇಳಿ ಬರುತ್ತಿದ್ದ ಹಾಗೆ ಕಾಶ್ಮೀರಿ ಪಂಡಿತರಿಗೆ ಇರಿಸು ಮುರಿಸು ಉಂಟಾಗಿದೆ.

ಕಾಶ್ಮೀರದಲ್ಲಿ ಸುಮಾರು 6ರಿಂದ 7 ಸಾವಿರ ಹಿಂದೂಗಳಿದ್ದಾರೆ. ಅವರಿಗಾಗಿ ಅನುಪಮ್ ಖೇರ್ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಹೀಗಾಗಿ ಅವರನ್ನು ಮೇಲ್ಮನೆಗೆ ನಾಮ ನಿರ್ದೇಶನ ಮಾಡಬಾರದು, ಖೇರ್ ಗಿಂತ ಉತ್ತಮ ಸಾಧನೆ ಮಾಡಿದವರು ದೇಶದಲ್ಲಿದ್ದಾರೆ. ಅವರನ್ನು ಪತ್ತೆ ಹಚ್ಚಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಕಾಶ್ಮೀರ ಪಂಡಿತರು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ವಕೀಲ ಸುಬ್ರಮಣಿಯನ್ ಸ್ವಾಮಿ, ನವ್ ಜೋತ್ ಸಿಂಗ್ ಸಿದ್ದು, ನರೇಂದ್ರ ಜಾಧವ್, ಮಲಯಾಳಂ ನಟ ಸುರೇಶ್ ಗೋಪಿ, ಪತ್ರಕರ್ತ ಸ್ವಪಾನ್ ದಾಸ್ ಗುಪ್ತಾ ಮತ್ತು ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಆರು ಜನರನ್ನು ಬಿಜೆಪಿ ಸರ್ಕಾರದಿಂದ ರಾಜ್ಯ ಸಭೆಗೆ ನಾಮ ನಿರ್ದೇಶನ ಗೊಳಿಸಲು ಬಯಸಿದೆ.

ಹೀಗಾಗಿ 7 ನೇ ಅಭ್ಯರ್ಥಿಯನ್ನಾಗಿ ಅನುಪಮ್ ಖೇರ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.

Write A Comment