ಕರ್ನಾಟಕ

ಸಿಎಂ ಬೇಜವಾಬ್ದಾರಿ ಹೇಳಿಕೆಗೆ ಯಡಿಯೂರಪ್ಪ ಕಿಡಿ

Pinterest LinkedIn Tumblr

yadiರಾಜ್ಯದಲ್ಲಿ ಭೀಕರ ಬರಗಾಲವಿಲ್ಲ. ಕೇಂದ್ರದಿಂದ ನಮಗೆ ವಿಶೇಷ ಪ್ಯಾಕೇಜ್‌ನ ಅಗತ್ಯವೂ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ್ದು, ಇದೊಂದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಕಿಡಿಕಾರಿದ್ದಾರೆ. ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಾ. ಬಿ.ಅರ್.ಅಂಬೇಡ್ಕರ್ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ಹಿಂದೆಂದೂ ಕಾಣದಷ್ಟು ಭೀಕರ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಇಲ್ಲದೆ ಪರದಾಡುತ್ತಿದ್ದಾರೆ. ಪ್ರಾಣಿ ಸಂಕುಲಗಳೂ ಸಹ ಪರಿತಪಿಸುತ್ತಿದ್ದರೆ, ರಾಜ್ಯದಲ್ಲಿಗಂಭೀರ ಸ್ವರೂಪದ ಬರಗಾಲವಿಲ್ಲ ಎಂದು ಹೇಳಿರುವುದು ಸರಿಯಲ ಎಂದು ಯಡಿಯೂರಪ್ಪಕಿಡಿಕಾರಿದರು. ರಾಜ್ಯದಲ್ಲಿ ಬರಗಾಲ ಕಾಣಿಸಿಕೊಂಡಿದ್ದ ರಿಂದಲೇ ಕೇಂದ್ರ ಸರ್ಕಾರ ಬರ ಅಧ್ಯಯನ ತಂಡವನ್ನು ಕಳುಹಿಸಿಕೊಟ್ಟಿತ್ತು. ಅಧಿಕಾರಿಗಳು ನೀಡಿದ ವರದಿಯಂತೆ ಹಿಂದೆ ಯಾವುದೇ ಸರ್ಕಾರಗಳು ನೀಡದಷ್ಟು ಅನುದಾನವನ್ನು ನೀಡಿದ್ದಾರೆ. ಮೊದಲು ಸರ್ಕಾರ ಈ ಹಣವನ್ನು ಸದ್ವಿನಿಯೋಗ ಮಾಡಿಕೊಂಡುಜನರ ಸಮಸ್ಯೆ ಪರಿಹರಿಸಲಿ ಎಂದು ಸಲಹೆ ಮಾಡಿದರು.

ಬರಗಾಲವಿಲ್ಲದಿದ್ದರೆ ಮುಖ್ಯಮಂತ್ರಿಅವರು, ಕಳೆದ ಮೂರು ದಿನಗಳಿಂದ ಉತ್ತರಕರ್ನಾಟಕ ಪ್ರವಾಸಕೈಗೊಂಡಿದ್ದು ಎಕೆ ಎಂಬುದನ್ನು ಬಹಿರಂಗಪಡಿಸಬೇಕು. ಉಡಾಫೆಯಾಗಿ ಮಾತನಡುವ ಮೊದಲು ಬರಗಾಲದ ಗಮನ ನೀಡಬೇಕು. ಜವಬ್ದಾರಿಯುತ ಸ್ಥಾನದಲ್ಲಿರುವವರು ವಾಸ್ತವಿಕತೆ ಅರಿತು ಮಾತನಾಡಲಿ ಎಂದು ಬಿಎಸ್‌ವೈ ಹೇಳೀದರು. ಇದೇ 27 ರಿಂದ ನಾನು ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದೇನೆ. ಈಗಾಗಲೇ ನಮ್ಮ ಪಕ್ಷ 12 ತಂಡ ವಿವಿಧೆಡೆ ಪ್ರವಾಸ ಕೈಗೊಂಡು ಬರಅಧ್ಯಯನ ನಡೆಸಿದೆ.ಜನತೆ ಸಂಕಷ್ಟದಲ್ಲಿರುವುದರಿಂದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಅವರ ಬರ ಪರಿಹಾರಕ್ಕೆ ನೀಡುವಂತೆ ಸೂಚಿಸಿದ್ದೇನೆ. ಈ ಹಣವನ್ನುಖುದ್ದು ನಾನೇ ಮುಖ್ಯಮಂತ್ರಿಹೆ ನೀಡಲಿದ್ದೇನೆಂದು ವಿವಿರಿಸಿದರು.

ಸರ್ಕಾರದ ವೈಫಲ್ಯ:

ಬೆಂಗಳೂರಿನಲ್ಲಿ ಕಾರ್ಮಿಕರುತಮ್ಮ ಬೇಡಿಕೆಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಕೆಲವರು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಸೌಹರ್ದಯುತವಾಗಿ ಬಗೆಹರಿಸಬೇಕಿತ್ತು. ಆದರೆ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಹರಿಹಾಯ್ದರು.
ಕಾರ್ಮಿಕರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು, ಸರಿಯಲ್ಲ. ಎರಡು ದಿನ ನಗರದಲ್ಲಿ ನಡೆದಿರುವ ಘಟನೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ದೂರಿದರು.

Write A Comment