ಕರ್ನಾಟಕ

ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ ! ಬೇಸತ್ತು ಟೆಕ್ಕಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

suicide

ಮಂಡ್ಯ: ಪತಿ ಮತ್ತು ಅತ್ತೆಯಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಟೆಕ್ಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮದ್ದೂರಿನ ಲೀಲಾವತಿ ಲೇಔಟ್ ನಲ್ಲಿ ನಡೆದಿದೆ.

28 ವರ್ಷದ ಸುಪ್ರಜಾ ಆತ್ಮಹತ್ಯೆಗೆ ಶರಣಾದ ಮಹಿಳೆ. ತಾನು ಪ್ರೀತಿಸಿದ ಪ್ರತಾಪ್ ಎಂಬುವವನನ್ನು 2011ರಲ್ಲಿ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದಳು. ದಂಪತಿಗಳು ಮೂರುವ ವರ್ಷದ ಗಂಡು ಮಗುವಿತ್ತು. ಕಳೆದ ಎರಡು ವರ್ಷಗಳಿಂದ ಅತ್ತೆ ಮತ್ತು ಪತಿ ತವರಿನಿಂದ ವರದಕ್ಷಿಣೆ ತರುವಂತೆ ಪೀಡಿಸಿ, ಹಿಂಸಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಆಕೆ ಮನೆನೊಂದು ಆತ್ಮಹತ್ಯೆ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಆರು ಪುಟಗಳ ಆತ್ಮಹತ್ಯೆ ಬರೆದಿಟ್ಟ ಸುಪ್ರಜಾ, ತನ್ನ ಪತಿ ಮತ್ತು ಅತ್ತೆ ಹೇಗೆ ಹಿಂಸಿಸುತ್ತಿದ್ದರೂ ಎಂಬುದನ್ನು ವಿವರಿಸಿದ್ದಾಳೆ. ಸುಪ್ರಜಾಳ ತಂದೆ ಮಂಜುನಾಥ್ ಅವರು, ತನ್ನ ಮಗಳಿಗೆ ಅವರ ಗಂಡನ ಮನೆಯವರು ಕಳೆದು ಎರಡು ವರ್ಷಗಳಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಕರೆಸ್ಪಾಂಡೆನ್ಸ್ ನಲ್ಲಿ ಎಂಟೆಕ್ ಮಾಡುತ್ತಿದ್ದಾ ಸುಪ್ರಜಾ, ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಳು ಎಂದು ತಿಳಿಸಿದ್ದಾರೆ.

ನಾನು ಪ್ರತಾಪ್ ನನ್ನು ತುಂಬಾ ಪ್ರೀತಿಸಿ ಮದುವೆಯಾದ. ಆದರೆ, ಪ್ರೀತಿಗೆ ಪ್ರತಾಪ್ ಮೋಸ ಮಾಡಿದೆ. ಪ್ರತಾಪ್ ನಂಬಿಕೆಗೆ ಅನರ್ಹ. ನನ್ನ ಅತ್ತೆಗೆ ಸಮಾಧಾನಿಸಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾನು ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾಳೆ. ಸುಪ್ರಜಾಳ ದೇಹದಲ್ಲಿ ಗಾಯದ ಗುರುತಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಎಂದು ಸುಪ್ರಜಾಳ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರತಾಪ್ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ.

Write A Comment