
ಹೈದರಾಬಾದ್: ಸೂರಿಲ್ಲದೆ ನಡುರಸ್ತೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಗೆ ಹೈದರಾಬಾದ್ನ ನಾರಾಯಣಗುಡ ಪೊಲೀಸರು ನಿನ್ನೆ ರಸ್ತೆಬದಿಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮೂವರು ಮಹಿಳಾ ಪೇದೆಗಳು ಸ್ಥಳಕ್ಕೆ ಹೋದರು. ಆದರೆ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವಷ್ಟು ಸಮಯಾವಕಾಶ ಇರಲಿಲ್ಲ. ಆದ್ದರಿಂದ ರಸ್ತೆಬದಿಯಲ್ಲೇ ಸೀರೆ ಮತ್ತು ಬೆಡ್ಶೀಟ್ಗಳನ್ನು ಬಳಸಿ ಮಹಿಳಾ ಪೊಲೀಸ್ ಪೇದೆಗಳು ಆಕೆಗೆ ಹೆರಿಗೆ ಮಾಡಿಸಿದರು.

ಮಹಿಳೆ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಇದೀಗ ಇಬ್ಬರನ್ನೂ ಕಿಂಗ್ ಕೋಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಗಾಗಿ ಪೊಲೀಸರು ಮನೆ ಹುಡುಕುತ್ತಿದ್ದಾರೆ.