ಮನೋರಂಜನೆ

ಪ್ರತ್ಯೂಷ ಗರ್ಭವತಿಯಾಗಿದ್ದ ವಿಚಾರ ರಾಹುಲ್ ಗೆ ಗೊತ್ತಿತ್ತು

Pinterest LinkedIn Tumblr

pratyusha-and-rahul

ಮುಂಬೈ: ಪ್ರತ್ಯೂಷ ಗರ್ಭವತಿಯಾಗಿದ್ದ ವಿಚಾರ ಆಕೆಯ ಬಾಯ್ ಫ್ರೆಂಡ್ ಆಗಿದ್ದ ನಟ ರಾಹುಲ್ ರಾಜ್ ಸಿಂಗ್ ಅವರಿಗೆ ಗೊತ್ತಿತ್ತು ಎಂಬ ವಿಚಾರ ಬುಧವಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, ಪ್ರತ್ಯೂಷ ಗರ್ಭವತಿಯಾಗಿರುವ ವಿಚಾರ ಸಂಬಂಧ ರಾಹುಲ್ ರಾಜ್ ಸಿಂಗ್ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಗರ್ಭಿಣಿಯಾಗಿದ್ದ ವಿಚಾರ ನನಗೆ ತಿಳಿದಿತ್ತು ಎಂದು ರಾಹುಲ್ ಹೇಳಿಕೊಂಡಿದ್ದಾನೆಂದು ಹೇಳಿಕೊಂಡಿದೆ.

ಇನ್ನು ಪೊಲೀಸರೊಂದಿಗೆ ಈ ವಿಚಾರ ಹಂಚಿಕೊಂಡಿರುವ ಬಗ್ಗೆ ರಾಹುಲ್ ರಾಜ್ ಸಿಂಗ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಹುಲ್ ಪ್ರತ್ಯೂಷ ಗರ್ಭಿಣಿಯಾಗಿದ್ದ ವಿಚಾರವನ್ನು ಒಪ್ಪಿಕೊಂಡಿಲ್ಲ. ಸಾಯುವುದಕ್ಕೂ ಮುನ್ನ ಪ್ರತ್ಯೂಷ ಮಾನಸಿಕವಾಗಿ ಬೇಸರಗೊಂಡಿದ್ದಳು ಎಂದು ಹೇಳಿಕೊಂಡಿದ್ದಾರೆ.

ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣ ಸಂಬಂಧ ಹಲವು ಅನುಮಾನಗಳು ಮೂಡಿದ್ದವು. ಆಕೆಯದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿದ್ದವು.

ಇದಕ್ಕೆ ಉತ್ತರ ಸಿಗುವುದಕ್ಕೂ ಮುನ್ನವೇ ಮತ್ತೊಂದು ವಿಚಾರ ನಿನ್ನೆ ಬಹಿರಂಗವಾಗಿತ್ತು. ಪ್ರತ್ಯೂಷ ಮೃತ ದೇಹವನ್ನು ಜೆಜೆ. ಆಸ್ಪತ್ರೆಯ ವೈದ್ಯರ ತಂಡ 3 ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿತ್ತು. ಪರಿಶೀಲನೆ ವೇಳೆ ಪ್ರತ್ಯೂಷ ಸಾಯುವುದಕ್ಕೂ ಕೆಲ ದಿನಗಳು ಅಥವಾ ತಿಂಗಳ ಹಿಂದೆ ಗರ್ಭಪಾತ ಮಾಡಿಸಿಕೊಂಡಿರುವುದು ತಿಳಿದುಬಂದಿತ್ತು. ಆದರೆ, ಮಗು ಯಾರದ್ದೂ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ವೈದ್ಯರು ಹೇಳಿದ್ದರು.

Write A Comment