ರಾಷ್ಟ್ರೀಯ

ತನ್ನ 8 ತಿಂಗಳ ಕೂಸಿನ ಮೇಲೆ ಅತ್ಯಾಚಾರ ಎಸಗಿದವನ ಎರಡೂ ಕೈಗಳನ್ನು ಕತ್ತರಿಸಿ ಪ್ರತೀಕಾರ ತೀರಿಸಿಕೊಂಡ ತಂದೆ !

Pinterest LinkedIn Tumblr

34

ಭಟಿಂಡ (ಪಂಜಾಬ್): ತನ್ನ 8 ತಿಂಗಳ ಕೂಸಿನ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಪ್ರತೀಕಾರವಾಗಿ ತಂದೆಯೊಬ್ಬ ಅತ್ಯಾಚಾರಿಯ ಎರಡೂ ಕೈಗಳನ್ನು ಕತ್ತರಿಸಿರುವ ಘಟನೆಯೊಂದು ಭಟಿಂಡ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಏಪ್ರಿಲ್ 2014ರಂದು 17 ವರ್ಷದ ಅಪ್ರಾಪ್ತ ಬಾಲಕನೊಬ್ಬ 8 ತಿಂಗಳ ಹೆಣ್ಣು ಮಗವಿನ ಮೇಲೆ ಅತ್ಯಾಚಾರ ನಡೆಸಿದ್ದ. ಪ್ರಕರಣ ಸಂಬಂಧ ನಿನ್ನೆ ಭಟಿಂಡ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈ ವೇಳೆ ಇಬ್ಬರೂ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ವಿಚಾರಣೆ ನಡೆದ ನಂತರ ಮಗುವಿನ ತಂದೆ ಅತ್ಯಾಚಾರಿಯನ್ನು ಬೈಕ್ ನಲ್ಲಿ ಹಳ್ಳಿಯವರೆಗೂ ಡ್ರಾಪ್ ಮಾಡುವಂತೆ ತಿಳಿಸಿದ್ದಾನೆ. ಇದರಂತೆ ಅತ್ಯಾಚಾರಿ ಯುವಕ ಆತನನ್ನು ಬೈಕ್ ನಲ್ಲಿ ಹತ್ತಿಸಿಕೊಂಡಿದ್ದಾನೆ. ಜುಂಬಾ ಗ್ರಾಮದ ಬಳಿ ಬರುತ್ತಿದ್ದಂತೆ ಮಗುವಿನ ತಂದೆ ಬೈಕ್ ನಿಂದ ಇಳಿಸುವಂತೆ ತಿಳಿಸಿದ್ದಾನೆ. ಬೈಕ್ ನಿಲ್ಲಿಸುತ್ತಿದ್ದಂತೆ ಆತನನ್ನು ಮರಕ್ಕೆ ಕಟ್ಟಿ ಹಾಕಿರುವ ಆತ ನಂತರ ಆತನನ್ನು ಥಳಿಸಿ ಎರಡೂ ಕೈಗಳನ್ನು ಕತ್ತರಿಸಿದ್ದಾನೆ.

ಈ ಘಟನೆಯನ್ನು ನೋಡಿದ ಸ್ಥಳೀಯರು ಯುವಕನನ್ನು ಭಟಿಂಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಪೊಲೀಸರು ಕತ್ತರಿಸಿದ ಕೈಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಸ್ತುತ ಮಗುವಿನ ತಂದೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Write A Comment