ಕರ್ನಾಟಕ

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ! ಮೇನಲ್ಲಿ ತೆರೆಕಾಣಲಿದೆ 2 ಚಿತ್ರಗಳು

Pinterest LinkedIn Tumblr

Ganesh1

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬುಗುರು ಚಿತ್ರ ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು ಬಳಿಕ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಇದೀಗ 2016 ಗಣೇಶ್ ಅವರಿಗೆ ಅದೃಷ್ಟದ ವರ್ಷವಾದಂತಿದೆ. ಇದೇ ಮೇ ತಿಂಗಳಿನಲ್ಲಿ ಅವರ ನಟನೆಯ ಎರಡೆರಡು ಚಿತ್ರಗಳು ತೆರೆಗೆ ಬರುವ ಸೂಚನೆ ನೀಡವೆ.

2014ರಲ್ಲೇ ಅಧಿಕೃತವಾಗಿ ಲಾಂಚ್ ಆಗಿದ್ದ ಪಿಸಿ ಶೇಖರ್ ನಿರ್ದೇಶನದ ಸ್ಟೈಲ್ ಕಿಂಗ್ ಚಿತ್ರದ ಬಿಡುಗಡೆ ದಿನಾಂಕ ಮೇ 6ಕ್ಕೆ ನಿಗದಿಯಾಗಿದೆ. ಇನ್ನು ಜೂಮ್ ಚಿತ್ರದ ನಿರ್ಮಾಪಕರು ಸಹ ಚಿತ್ರವನ್ನು ಮೇ 20ರಂದು ತೆರೆಗೆ ತರುವ ಸೂಚನೆಗಳನ್ನು ನೀಡಿದ್ದಾರೆ.

ಇನ್ನು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಗಣೇಶ್ ಸೂಪರ್ ಮೀನಿಟ್ ನಂತರ ಗಂಡು ಎಂದರೆ ಗಂಡು ಚಿತ್ರದಲ್ಲಿ ನಟಿಸಲಿದ್ದಾರೆ. ಗಣೇಶ್ ನಟನೆ ನಾಲ್ಕು ಚಿತ್ರಗಳು ಶೂಟಿಂಗ್ ಮುಗಿಸಿವೆ. ಅದರಲ್ಲಿ ಸ್ಟೈಲ್ ಕಿಂಗ್ ಹಾಗೂ ಜೂಮ್ ತೆರೆಗೆ ಬರಲು ಸಿದ್ಧವಾಗಿದ್ದು, ಇನ್ನು ಪಟಾಕಿ ಹಾಗೂ ಮುಂಗಾರು ಮಳೆ2 ಚಿತ್ರಗಳ ಪೋಸ್ಟ್ ಪ್ರೋಡೆಕ್ಷನ್ ಕೆಲಸಗಳು ನಡೆಯುತ್ತಿವೆ.

ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿರುವುದು ಇದೀಗ ನಿರ್ಮಾಪಕರಿಗೆ ತಲೆ ನೋವಾದಂತಿದೆ. ಸದ್ಯ ಮೊದಲು ತೆರೆಗೆ ಬರುತ್ತಿರುವ ಸ್ಟೈಲ್ ಕಿಂಗ್ ಚಿತ್ರದ ನಿರ್ದೇಶಕ ಪಿಸಿ ಶೇಖರ್ ಜೂಮ್ ಚಿತ್ರದ ನಿರ್ದೇಶಕ ನಿರ್ಮಾಪಕ ಪ್ರಶಾಂತ್ ರಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಸ್ಟೈಲ್ ಕಿಂಗ್ ಚಿತ್ರವನ್ನು ತೆರೆಗೆ ತರುವುದಾಗಿ ಘೋಷಿಸಿದ್ದೇನೆ ಆದರೂ ಜೂಮ್ ಚಿತ್ರವನ್ನು ಅದೇ ತಿಂಗಳಲ್ಲಿ ತೆರೆಗೆ ತರುತ್ತಿರುವುದು ನನ್ನ ತಾಳ್ಮೆ ಕೆಡೆಸುವಂತಿದೆ ಎಂದರು. ಇನ್ನು ಗಣೇಶ್ ಅವರನ್ನು ಕೇಳಿದರೆ ನಾನೊಬ್ಬ ನಟ ಚಿತ್ರದ ಬಿಡುಗಡೆ ದಿನಾಂಕಗಳನ್ನು ತೀರ್ಮಾನಿಸುವ ಅಧಿಕಾರ ನನಗಿಲ್ಲ ಎಂದು ಹೇಳಿರುವುದಾಗಿ ಶೇಖರ್ ಹೇಳಿದ್ದಾರೆ.

Write A Comment