ರಾಷ್ಟ್ರೀಯ

ಭಾರತದ 10 ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಉಚಿತ ಹೈ ಸ್ಪೀಡ್ ವೈ ಪೈ ಸೇವೆ

Pinterest LinkedIn Tumblr

wifi1wifi

ಚೆನ್ನೈ: ರೈಲ್ವೇ ಇಲಾಖೆ ಭಾರತದ 10 ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಉಚಿತ ಹೈ ಸ್ಪೀಡ್ ವೈ ಪೈ ಸೇವೆ ಒದಗಿಸಲಿದೆ.

ಮುಂಬೈ ರೈಲು ನಿಲ್ದಾಣದಲ್ಲಿ ಮೊದಲ ವೈ ಫೈ ಸೇವೆ ಆರಂಭಿಸಿದ ನಂತರ ಪುಣೆ, ಭುವನೇಶ್ವರ್, ಭೂಪಾಲ್, ರಾಂಚಿ, ರಾಯ್ಪುರ, ವಿಜಯವಾಡ, ಕಾಚೇಗುಡ, ಎರ್ನಾಕುಲಂ, ಮತ್ತು ವಿಶಾಖ ಪಟ್ಟಣಂ ಗಳಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸೇವೆ ಒದಗಿಸಲಾಗುತ್ತದೆ.

ರೈಲ್ವೆ ಇಲಾಖೆ ಮತ್ತು ಗೂಗಲ್ ಸಹಭಾಗಿತ್ವದಲ್ಲಿ ದೇಶದ 10 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿರುವ ಉಚಿತ ವೈ ಫೈ ಸೇವೆಯಿಂದ ಸುಮಾರು 1.4 ಮಿಲಿಯನ್ ಭಾರತೀಯರು ಪ್ರತಿದಿನ ಇದರ ಸೇವೆ ಪಡೆಯಬಹುದಾಗಿದೆ. ಶೀಘ್ರದಲ್ಲೇ ರೈಲ್ವೆ ಸಚಿವ ಸುರೇಶ್ ಪ್ರಭು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಿದ್ದಾರೆ.

ಪ್ರಯಾಣಿಕರು ಸಂಚರಿಸುವಾಗ ಈ ರೈಲ್ವೆ ನಿಲ್ದಾಣಗಳಲ್ಲಿ ತಮಗೆ ಬೇಕಾದ ಮಾಹಿತಿ, ವಿಡಿಯೋ , ಗೇಮ್ಸ್ ಮುಂತಾದವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.2016 ನೇ ವರ್ಷದ ಅಂತ್ಯದ ವೇಳೆಗೆ ಸುಮಾರು 10 ಲಕ್ಷ ಭಾರತೀಯರು ಈ ವೈಫೈ ಸೇವೆ ಪಡೆಯಲಿದ್ದಾರೆ,ಮುಂದಿನ ದಿನಗಳಲ್ಲಿ ಸುಮಾರು 100 ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೇವೆ ಅಳವಡಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ.

Write A Comment