ಮನೋರಂಜನೆ

ರಜನಿ ಜತೆ ಸಿನಿಮಾ ಮಾಡಿದರೆ ಅವರ ಅಭಿಮಾನಿಗಳು ನನ್ನನ್ನು ಕೊಂದೆ ಹಾಕ್ತಾರೆ: ರಾಮ್ ಗೋಪಾಲ್ ವರ್ಮಾ

Pinterest LinkedIn Tumblr

Ram Gopal Varma-Rajinikanth

ಮುಂಬೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಕಾಮೆಂಟ್ ಮಾಡಿ ತಲೈವಾ ಫ್ಯಾನ್ಸ್ ಗಳ ಟೀಕೆಗೆ ಗುರಿಯಾಗಿದ್ದ ರಾಮ್ ಗೋಪಾಲ್ ವರ್ಮಾ ಇದೀಗ ರಜನಿ ಜತೆ ಸಿನಿಮಾ ಮಾಡಿದರೆ ಅವರ ಅಭಿಮಾನಿಗಳು ನನ್ನನ್ನು ಕೊಂದೆ ಹಾಕ್ತಾರೆ ಎಂದು ಹೇಳಿದ್ದಾರೆ.

ಬ್ಯಾಡ್ ಲುಕರ್, ಅವರಿಗೆ ಡ್ಯಾನ್ಸ್ ಬರೋಲ್ಲ ಈಗೆಲ್ಲಾ ರಜನಿಕಾಂತ್ ಅವರ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳಿಂದ ಇನ್ನಿಲ್ಲದ್ದಂತೆ ವಿರೋಧ ಎದುರಿಸಿದ ವರ್ಮಾ ಇದೀಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಾನಾ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ.

ರಜನಿಕಾಂತ್ ಅವರ ಅಭಿಮಾನಿಗಳು ಮೂಕರಾದಂತಿದೆ. ಅವರಿಗೆ ನಾನು ಯಾವ ಅರ್ಥದಲ್ಲಿ ರಜನಿ ಬಗ್ಗೆ ಈ ರೀತಿ ಟ್ವೀಟ್ ಮಾಡಿದೆ ಎಂಬುದನ್ನು ತಿಳಿಯದೆ ನಾನು ರಜನಿಯನ್ನು ಟೀಕಿಸಿದೆ ಎಂದು ಭಾವಿಸಿದ್ದಾರೆ. ನಿಜಾರ್ಥದಲ್ಲಿ ನಾನಾ ರಜನಿ ಅವರನ್ನು ಅಭಿನಂದಿಸಿದ್ದೇನೆ. ಸ್ಫೂರದ್ರೂಪಿ ವ್ಯಕ್ತಿ ದೊಡ್ಡ ಸ್ಟಾರ್ ನಟನಾಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ರಜನಿಯಂತವರು ಸೂಪರ್ ಸ್ಟಾರ್ ಆಗುವುದಿದೆಯಲ್ಲಾ ಅದು ದೊಡ್ಡ ವಿಷಯ ಎಂದು ವರ್ಮಾ ಹೇಳಿದ್ದಾರೆ.

ಹಿಂದಿಯ ವೀರಪ್ಪನ್ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ವರ್ಮಾ ಪತ್ರಕರ್ತರಿಗೆ ಈ ರೀತಿ ಹೇಳಿದ್ದಾರೆ.

ರಜನಿಕಾಂತ್ ಜತೆ ನಟಿಸುತ್ತಿರುವ ಖುಷಿಗೆ ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡ ನಟಿ ಆಮಿ ಜಾಕ್ಸನ್ ಟ್ವೀಟ್ ಮಾಡಿದ್ದರು. ರಜನಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ನನಗೆ ಇನ್ನಿಲ್ಲದಂತೆ ಸಂತೋಷವಾಗಿತ್ತು ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿ ರಾಮ್ ಗೋಪಾಲ್ ವರ್ಮಾ ಕೂಡಲೇ ರಜನಿ ಅವರು ಬ್ಯಾಡ್ ಲುಕರ್ ಅವರಿಗೆ ಡ್ಯಾನ್ಸ್ ಬರೋಲ್ಲ ಎಂದು ಟ್ವೀಟ್ ಮಾಡಿ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

Write A Comment