ಕರ್ನಾಟಕ

ಕೆಲಸ ಖಾಯಂ ಮಾಡಿ; ಕ್ರೇನ್ ಕಂಬ ಹತ್ತಿ ನಾಲ್ವರು ನೌಕರರ ಪ್ರತಿಭಟನೆ!

Pinterest LinkedIn Tumblr

can_unloader_bigಮಂಡ್ಯ: ಕೆಲಸ ಖಾಯಂ ಮಾಡಲು ಆಗ್ರಹಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಕ್ರೇನ್ ಕಂಬ ಹತ್ತಿ ನಾಲ್ವರು ನೌಕರರು ಪ್ರತಿಭಟನೆ ನಡೆಸುತ್ತಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆಎಂ ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ನಾಲ್ವರು ನೌಕರರು ಕ್ರೇನ್ ಕಂಬ ಹತ್ತಿ ಕುಳಿತು ಕೆಲಸ ಖಾಯಂ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೆಲಸ ಖಾಯಂಗೆ ಆಗ್ರಹಿಸಿ ಕಳೆದ 2 ತಿಂಗಳಿನಿಂದ ನೌಕರರಾದ ಸಂತೋಷ್, ಮಹಾದೇವು, ಮಹಾದೇವಸ್ವಾಮಿ, ಮಧು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದು, ನೌಕರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
-ಉದಯವಾಣಿ

Write A Comment