ಕರ್ನಾಟಕ

ಕಲಾವಿದರ ಸಂಘ ಸಹಾಯಾರ್ಥ ಕಾರ್ಯಕ್ರಮದಲ್ಲಿ ರಜನಿ ಕಾಂತ್, ಸುದೀಪ್, ಅಂಬರೀಶ್, ಮಮ್ಮೂಟಿ

Pinterest LinkedIn Tumblr

rajani-sudip

ಚೆನ್ನೈ: ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ದಕ್ಷಿಣ ಭಾರತದ ನಟರು ಒಗ್ಗೂಡಿದ್ದಾರೆ.

ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಆಯೋಜಿಸಲಾಗಿದ್ದ ಒಂದು ದಿನದ ಸ್ಟಾರ್ಸ್ ಕ್ರಿಕೆಟ್ ಲೀಗ್ ನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಉದ್ಘಾಟನೆ ಮಾಡಿದರು. ದಕ್ಷಿಣ ಭಾರತದ ನಟರೊಂದಿಗೆ ಕಲಾವಿದರ ಸಂಘದ (ಎಸ್ ಐಎಎ) ಪದಾಧಿಕಾರಿಗಳು, ಎಸ್ಐಎಎ ಅಧ್ಯಕ್ಷ ನಾಸಿರ್, ಪ್ರಧಾನ ಕಾರ್ಯದರ್ಶಿ ವಿಶಾಲ್ ರೆಡ್ಡಿ ಭಾಗವಹಿಸಿದ್ದರು.

ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಟ ಬಾಲಕೃಷ್ಣ, ವೆಂಕಟೇಶ್, ಸುದೀಪ್, ಅಂಬರೀಶ್, ಮಮ್ಮೂಟಿ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಅನೇಕ ನಟರು ಭಾಗವಹಿಸಿದ್ದರು.

ಲೀಗ್ ಪಂದ್ಯ ನಡೆದ ಬಳಿಕ ನಟ ಸೂರ್ಯ ನೇತೃತ್ವದ ಚೆನ್ನೈ ಸಿಂಗಮ್ಸ್ ತಂಡ ಹಾಗೂ ಜೀವಾ ನೇತೃತ್ವದ ತಂಜಾವೂರ್ ತಂಡದ ನಡುವೆ ಫೈನಲ್ ಪಂದ್ಯ ನಡೆದು ಸೂರ್ಯ ನೇತೃತ್ವದ ತಂಡ ಜಯಗಳಿಸಿತು. ಚೆನ್ನೈ ನ ಟಿ.ನಗರ್ ನಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Write A Comment