ಕರ್ನಾಟಕ

ಬಾಲಕಿಯ ಗಿನ್ನೆಸ್‌ ದಾಖಲೆ

Pinterest LinkedIn Tumblr

giಬೆಂಗಳೂರು: ಸಂಪಗಿರಾಮನಗರದ 13 ವರ್ಷದ ಬಾಲಕಿ ಜಿ. ತೇಜಸ್ವಿನಿ ಅವರು ಯೋಗದ ದಾರನೇತಿ ಕ್ರಿಯೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿ ಗಿನ್ನೆಸ್‌ ದಾಖಲೆ ಮಾಡಿದ್ದಾರೆ. ಗಿನ್ನೆಸ್‌ ಗಿರೀಶ್‌ ಅವರ ಪುತ್ರಿಯಾದ ತೇಜಸ್ವಿನಿ ಕೆಥೆಡ್ರೆಲ್‌್ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಅವರು 143 ಅಡಿ ಉದ್ದದ ದಾರವನ್ನು 30 ಸೆಕೆಂಡ್‌ಗಳಲ್ಲಿ ಮೂಗಿನಿಂದ ತೂರಿಸಿ ಬಾಯಿಂದ ಹೊರತೆಗೆದಿದ್ದರು. ಅದನ್ನು ಪರಿಗಣಿಸಿ ಗಿನ್ನೆಸ್‌ ಸಂಸ್ಥೆಯು ತೇಜಸ್ವಿನಿ ಅವರ ಹೆಸರನ್ನು ಗಿನ್ನೆಸ್‌ ಪುಸ್ತಕದಲ್ಲಿ ಸೇರಿಸಿ ಅಧಿಕೃತ ಪ್ರಮಾಣಪತ್ರವನ್ನು ಕಳುಹಿಸಿಕೊಟ್ಟಿದೆ ಎಂದು ತೇಜಸ್ವಿನಿ ಅವರ ತಂದೆ ಗಿರೀಶ್‌ ತಿಳಿಸಿದರು.
‘ಯೋಗದಲ್ಲಿ ಸಾಧನೆ ಮಾಡಬೇಕೆಂದು ನಿರ್ಧರಿಸಿ ದಾರನೇತಿ ಕ್ರಿಯೆಯಲ್ಲಿ ಗಿನ್ನೆಸ್‌ ದಾಖಲೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಮಾಡುವ ಕನಸಿದೆ’ ಎಂದು ತೇಜಸ್ವಿನಿ ಅವರು ಸಂತಸ ಹಂಚಿಕೊಂಡರು.
ಪ್ರಮಾಣ ಪತ್ರ ವಿತರಣೆ: ತೇಜಸ್ವಿನಿ ಅವರಿಗೆ ಭಾರತ ಕ್ರೀಡಾ ಪ್ರಾಧಿಕಾರದ ಹಿರಿಯ ತರಬೇತುದಾರ ಡಾ. ಗಾಂಧಿ ಹಾಗೂ ಕ್ರೀಡಾ ತರಬೇತುದಾರ ಯತೀಶ್‌ಕುಮಾರ್‌ ಅವರು ‘ವಿಶ್ವ ಗಿನ್ನೆಸ್‌ ದಾಖಲೆ’ ಪ್ರಮಾಣಪತ್ರವನ್ನು ಶನಿವಾರ ಜಂಟಿಯಾಗಿ ವಿತರಿಸಿದರು.

Write A Comment