ಕರ್ನಾಟಕ

ಬೆಂಗಳೂರಿನಲ್ಲಿ ನಡೆಯಲಿದೆ ಐಪಿಎಲ್‌ ಫೈನಲ್‌ ಪಂದ್ಯ

Pinterest LinkedIn Tumblr

M.Chinnaswamy-Stadium

ನವದೆಹಲಿ : ಮುಂಬೈನಲ್ಲಿ ನಡೆಯಬೇಕಿದ್ದ ಐಪಿಎಲ್‌ ಒಂಬತ್ತನೇ ಆವೃತ್ತಿಯ ಫೈನಲ್‌ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಭೀಕರ ನೀರಿನ ಅಭಾವ ಎದುರಾಗಿರುವ ಕಾರಣ ಮೇ ತಿಂಗಳಲ್ಲಿ ಅಲ್ಲಿ ನಡೆಯಬೇಕಿರುವ 13 ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಬಾಂಬೆ ಹೈಕೋರ್ಟ್‌ ಬಿಸಿಸಿಐಗೆ ಸೂಚಿಸಿತ್ತು.

ಆದ್ದರಿಂದ ಐಪಿಎಲ್ ಆಡಳಿತ ಮಂಡಳಿ ಶುಕ್ರವಾರ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಫ್ರಾಂಚೈಸ್‌ಗಳ ಜೊತೆ ಚರ್ಚಿಸಿ ಬೆಂಗಳೂರಿನಲ್ಲಿ ಫೈನಲ್‌ ನಡೆಸಲು ನಿರ್ಧರಿಸಿತು.

ಮೇ 29ರಂದು ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್ ಆಯೋಜನೆಯಾಗಿರುವ ಇದು ಎರಡನೇ ಬಾರಿ. 2014ರಲ್ಲಿ ಮೊದಲ ಬಾರಿಗೆ ನಡೆದಿತ್ತು.

ಬೆಂಗಳೂರಿಗೆ ಒಲಿದ ಫೈನಲ್‌ ಆತಿಥ್ಯದ ಅವಕಾಶ
ಮಹಾರಾಷ್ಟ್ರದಲ್ಲಿ ಭೀಕರ ನೀರಿನ ಅಭಾವ ಎದುರಾಗಿರುವ ಕಾರಣ ಮುಂಬೈನ ವಾಂಖೆಡೆ ಕ್ರೀಡಾಂ ಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಒಂಬತ್ತನೇ ಆವೃತ್ತಿಯ ಫೈನಲ್‌ ಪಂದ್ಯ ವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಈಗಾಗಲೇ ಎಂಟು ಪಂದ್ಯಗಳಿಗೆ ಉದ್ಯಾನನಗರಿ ಆತಿಥ್ಯ ವಹಿಸಿದೆ. ಫೈನಲ್‌ ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳನ್ನು ವೀಕ್ಷಿಸಲು ಈಗ ಅಭಿ ಮಾನಿಗಳಿಗೆ ಅವಕಾಶ ಲಭಿಸಿದೆ.

ಬೆಂಗಳೂರಿನಲ್ಲಿ 2014ರ ಐಪಿಎಲ್‌ ಟೂರ್ನಿಯ ಫೈನಲ್ ನಡೆದಿತ್ತು. ಆಗ ಕೋಲ್ಕತ್ತ ನೈಟ್‌ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್‌ ಪಂಜಾಬ್ ನಡುವೆ ಪಂದ್ಯ ಆಯೋಜನೆಯಾಗಿತ್ತು. ನೈಟ್ ರೈಡರ್ಸ್ ಚಾಂಪಿಯನ್‌ ಆಗಿತ್ತು.

ಮಹಾರಾಷ್ಟ್ರದಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಐಪಿಎಲ್‌ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸ ಬೇಕೆಂದು ಕೋರಿ ‘ಲೋಕಸತ್ತಾ ಆಂದೋಲನ’ ಸಂಸ್ಥೆ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾ ರಣೆ ನಡೆಸಿದ್ದ ಕೋರ್ಟ್‌ ಮೇ ನಲ್ಲಿ ಯಾವುದೇ ಐಪಿಎಲ್‌ ಮಹಾರಾಷ್ಟ್ರದಲ್ಲಿ ಪಂದ್ಯಗಳನ್ನು ನಡೆಸಬಾರದು. ಆ ತಿಂಗ ಳಲ್ಲಿ ನಡೆಯಬೇಕಿರುವ 13 ಪಂದ್ಯಗ ಳನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐಗೆ ಸೂಚಿಸಿತ್ತು.

ಆದ್ದರಿಂದ ಐಪಿಎಲ್‌ ಆಡಳಿತ ಮಂಡಳಿಯ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಫ್ರಾಂಚೈಸ್ ಜೊತೆ ಚರ್ಚೆ ನಡೆಸಿದರು. ಈ ವೇಳೆ ಬೆಂಗ ಳೂರಿಗೆ ಫೈನಲ್ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಎರಡನೇ ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯವನ್ನು ಕೋಲ್ಕತ್ತದಲ್ಲಿ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಜೊತೆಗೆ ಮಹಾರಾಷ್ಟ್ರದ ಐಪಿಎಲ್ ತಂಡಗಳಿಗೆ ರಾಯಪುರ, ಜೈಪುರ, ವಿಶಾಖಪಟ್ಟಣ ಮತ್ತು ಕಾನ್ಪುರಗಳಲ್ಲಿ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಶುಕ್ಲಾ ಅವಕಾಶ ಕೊಟ್ಟರು.

ಆಗ ಪುಣೆ ತಂಡ ವಿಶಾಖಪಟ್ಟಣ ವನ್ನು ಆಯ್ಕೆ ಮಾಡಿಕೊಂಡಿತು. ಆದರೆ ಮುಂಬೈ ಇಂಡಿಯನ್ಸ್ ಎರಡು ದಿನ ಕಾಲಾವಕಾಶ ಕೋರಿತು.

‘ಐಪಿಎಲ್‌ ಆಡಳಿತ ಮಂಡಳಿಯ ಸಭೆಗೂ ಮೊದಲು ಫೈನಲ್ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಬೆಂಗಳೂರಿನಲ್ಲಿ ಮತ್ತು ಎರಡನೇ ಕ್ವಾಲಿ ಫೈಯರ್, ಎಲಿಮಿನೇಟರ್ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು’ ಎಂದು ಶುಕ್ಲಾ ತಿಳಿಸಿದರು.

‘ಮೇ 1ರಂದು ಪುಣೆಯಲ್ಲಿ ಆಯೋ ಜನೆಯಾಗಿರುವ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ತಂಡಗಳ ನಡು ವಣ ಪಂದ್ಯವನ್ನು ಆಡಲು ಅವಕಾಶ ಕೊಡಬೇಕು ಎಂದು ಹೈಕೋರ್ಟ್ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಏಕೆಂದರೆ ಇದು ಉಭಯ ತಂಡಗಳಿಗೂ ತವರಿನ ಅಭಿಮಾನಿಗಳ ಎದುರಿನ ಪಂದ್ಯವಾ ಗಿದೆ’ ಎಂದೂ ಶುಕ್ಲಾ ಹೇಳಿದರು.

ಅಮಾನತಿನಲ್ಲಿಯೂ ಪಂದ್ಯ: ಕೆಲ ವಿವಾದಗಳ ಕಾರಣ ಸುದ್ದಿಯಲ್ಲಿರುವ ರಾಜಸ್ತಾನ ಕ್ರಿಕೆಟ್‌ ಸಂಸ್ಥೆಯನ್ನು ಬಿಸಿಸಿಐ ಅಮಾನತಿನಲ್ಲಿಟ್ಟಿದೆ. ಆದರೂ ಜೈಪುರದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸಲು ಅಡ್ಡಿಯೇನಿಲ್ಲ ಎಂದು ಶುಕ್ಲಾ ತಿಳಿಸಿದ್ದಾರೆ.

ನಿರೀಕ್ಷೆ ಇತ್ತು: ಬ್ರಿಜೇಶ್‌
ಬೆಂಗಳೂರು: ‘ಫೈನಲ್‌ ಪಂದ್ಯದ ಆತಿಥ್ಯದ ಅವಕಾಶ ನಮಗೆ ಲಭಿ ಸುವ ಬಗ್ಗೆ ನಿರೀಕ್ಷೆ ಇತ್ತು. ನಿರೀಕ್ಷೆ ನಿಜವಾಗಿದೆ. ಖುಷಿಯಾಗಿದೆ. ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳಿಗೆ ಮಹತ್ವದ ಪಂದ್ಯವನ್ನು ನೋಡಲು ಅವಕಾಶ ಸಿಕ್ಕಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಸಂತೋಷ ಹಂಚಿಕೊಂಡಿದ್ದಾರೆ.

2014ರ ಚಾಂಪಿಯನ್ಸ್‌ ಲೀಗ್ ಟ್ವೆಂಟಿ–20 ಟೂರ್ನಿಯ ಫೈನ ಲ್‌ಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಇತ್ತೀಚಿಗೆ ಮುಗಿದ ವಿಶ್ವ ಟೂರ್ನಿಯ ಪುರು ಷರ ವಿಭಾಗದ ಮೂರು ಪಂದ್ಯ ಗಳು ಇಲ್ಲಿಯೇ ನಡೆದಿದ್ದವು. ಒಂದು ವರ್ಷದ ಬಳಿಕ ಮತ್ತೊಂದು ಐಪಿಎಲ್‌ ಫೈನಲ್‌ ಸಂಘಟಿಸುವ ಅವಕಾಶ ಕೆಎಸ್‌ಸಿಎಗೆ ಲಭಿಸಿದೆ.

‘ಫೈನಲ್‌ ಪಂದ್ಯವೆಂದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ನಾವು ಎಲ್ಲಾ ಸಿದ್ಧರಾಗಿದ್ದೇವೆ. ಹಿಂದೆಯೂ ಐಪಿಎಲ್‌ ಫೈನಲ್‌ ಪಂದ್ಯ ಸೇರಿದಂತೆ ಹಲವಾರು ಮಹತ್ವದ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದ ಅನುಭವ ನಮಗಿದೆ. ಬಿಸಿಸಿಐ ನಿರ್ಧಾರ ಖುಷಿ ತಂದಿದೆ. ಆದರೆ ಬಿಸಿಸಿಐಯಿಂದ ನಮಗಿನ್ನು ಅಧಿಕೃತ ಮಾಹಿತಿ ಬಂದಿಲ್ಲ’ ಎಂದೂ ಬ್ರಿಜೇಶ್‌ ಅವರು ‘ಪ್ರಜಾವಾಣಿ’ ಜೊತೆ ತಿಳಿಸಿದರು.

Write A Comment