ಕರ್ನಾಟಕ

ಯಡಿಯೂರಪ್ಪರ ರಾಜ್ಯ ಪ್ರವಾಸಕ್ಕೆ ಸಿದ್ಧಗೊಂಡಿದೆ ಕೋಟಿ ಬೆಲೆಯ ಐಶಾರಾಮಿ ಕಾರು !

Pinterest LinkedIn Tumblr

car

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕಾಗಿ ಕೋಟಿ ಬೆಲೆಯ ಐಶಾರಾಮಿ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ಸಿದ್ಧವಾಗಿದೆ.

ಬಿಎಸ್ ಯಡಿಯೂರಪ್ಪ ಅವರು ಪಕ್ಷದ ಕಾರನ್ನು ಬಳಸದಿರಲು ನಿರ್ಧರಿಸಿದ್ದು, ರಾಜ್ಯ ಪ್ರವಾಸಕ್ಕೆ ತಮ್ಮ ಲ್ಯಾಂಡ್ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನೆ ಬಳಸುತ್ತಿದ್ದಾರೆ. ಈ ನಡುವೆ ಪ್ರಹ್ಲಾದ್ ಜೋಷಿ ಅವರು ಅಧ್ಯಕ್ಷರಾಗಿದ್ದಾಗ ಪಕ್ಷದ ಕಾರನ್ನು ಬಳಸುತ್ತಿದ್ದರು.

ಸುಮಾರು 1 ಕೋಟಿ 16 ಲಕ್ಷ ರುಪಾಯಿ ಬೆಲೆಯ ಈ ಲ್ಯಾಂಡ್ ಕ್ರೂಸರ್ ನಲ್ಲಿ ಹೈಟೆಕ್ ಸೌಲಭ್ಯವಿದ್ದು, ಕಾರಿನೊಳಗೆ ನಿಂತು ಜನರತ್ತ ಕೈಬೀಸುವ ವ್ಯವಸ್ಥೆ ಇದೆ. ಕಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ‘ನೇಮ್ ಪ್ಲೇಟ್ ಅಳವಡಿಸಲಾಗಿದ್ದು, ಕೆಎ.೦೩, ಎಂವೈ೪೫೪೫ ನಂಬರ್ ನಲ್ಲಿ ಕಾರು ನೊಂದಣಿಯಾಗಿದೆ.

ಇನ್ನು ಈ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜ್ಯಾಧ್ಯಕ್ಷಾರದ ಮೇಲೆ ರಾಜ್ಯ ಪ್ರವಾಸಕ್ಕೆ ಹೊರಟಿದ್ದೇನೆ. ಯಡಿಯೂರಪ್ಪ ಅವರು ಸುರಕ್ಷಿತವಾಗಿರಲಿ ಮತ್ತು ಚೆನ್ನಾಗಿರಲಿ ಎಂಬ ಉದ್ದೇಶದಿಂದ ಮಾಜಿ ಸಚಿವ ಮುರಗೇಶ್ ನಿರಾಣಿ ಅವರು ತಮಗೆ ಈ ಕಾರು ಗಿಫ್ಟ್ ಕೊಟ್ಟಿದ್ದಾರೆ. ಲ್ಯಾಂಡ್ ಕ್ರೂಸರ್ ಗಿಫ್ಟ್ ಪಡೆದಿರುವುದರಲ್ಲಿ ತಪ್ಪೇನಿದೆ ಎಂದು ಬಿಎಸ್ ವೈ ಪ್ರಶ್ನಿಸಿದ್ದಾರೆ.

Write A Comment