ಬೆಂಗಳೂರು, ಏ.12- ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾಗ ಮನೆ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು ಸೇರಿದಂತೆ 10 ಲಕ್ಷ ರೂ. ಬೆಲೆಯ ಚಿನ್ನ-ಬೆಳ್ಳಿ ದೋಚಿರುವ ಘಟನೆ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮುನಿವೆಂಕಟಪ್ಪ ಲೇಔಟ್ ನಿವಾಸಿ ಸಾಫ್ಟ್ವೇರ್ ಎಂಜಿನಿಯರ್ ಶೇಷಾದ್ರಿ ಎಂಬುವರ ಮನೆಯಲ್ಲಿ ನಗನಾಣ್ಯ ಕಳುವಾಗಿದೆ.
ಇದೇ ತಿಂಗಳ 8ರಂದು ಕುಟುಂಬ ಸಮೇತ ತಿರುಪತಿಗೆ ತೆರಳಿದ್ದು, ನಿನ್ನೆ ವಾಪಸ್ಸಾಗಿದ್ದಾರೆ. ಆಗ ಬೀಗ ಮುರಿದು ಕಳ್ಳರು ನಗದು ಸೇರಿದಂತೆ 10 ಲಕ್ಷ ರೂ. ಬೆಲೆಯ ಚಿನ್ನಬೆಳ್ಳಿ ಕಳವು ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದಾರೆ.