ದೆಹಲಿ: ಬಿ ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಜೆಡಿಎಸ್ ಮತ್ತು ಎನ್ ಸಿಪಿ ಖಂಡಿಸಿದೆ.
ಬಿಜೆಪಿ ಭ್ರಷ್ಟ ಮತ್ತು ಕ್ರಿಮಿನಲ್ ಗಳನ್ನು ಪೋಷಣೆ ಮಾಡುತ್ತಿದೆ. ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿಯ ನಡವಳಿಕೆ ಏನೆಂಬುದು ಈ ಮೂಲಕ ತಿಳಿಯುತ್ತದೆ. ಅಂದಿಗೂ ಮತ್ತು ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಜನರು ಸಹಿಸಿಕೊಳ್ಳುವುದಿಲ್ಲ ಎಂದು ಜೆಡಿ(ಎಸ್)ನಾಯಕ ಧನಿಶ್ ಅಲಿ ಹೇಳಿದ್ದಾರೆ.
ಇನ್ನು ಯಡಿಯೂರಪ್ಪ ಆಯ್ಕೆ ಬಗ್ಗೆ ಪ್ರತಿಕ್ರಯಿಸಿರುವ ಎನ್ ಸಿಪಿ ನಾಯಕ ತರಿಖ್ ಅನ್ವರ್, ಲಿಂಗಾಯುತ ಜನಾಂಗ ಬಲಾಢ್ಯ ಮನುಷ್ಯನನ್ನು ನೇಮಕ ಮಾಡಿದೆ. ಬಲ ತತ್ವ ಮತ್ತು ಬಲ ಮೌಲ್ಯಗಳ ಬಗ್ಗೆ ಮಾತನಾಡುವ ಬಿಜೆಪಿ ಭ್ರಷ್ಟರನ್ನು ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಕಿಡಿ ಕಾರಿದ್ದಾರೆ.