
ಕಾಡು ಅಣಬೆ ಸೇವನೆ ಪರಿಣಾಮ ಮಿಜೋರಾಂ ನಲ್ಲಿ ಮೂವರ ಸಾವು ಕಾಡು ಅಣಬೆ ಸೇವನೆ ಪರಿಣಾಮ ಮಿಜೋರಾಂ ನಲ್ಲಿ ಮೂವರ ಸಾವು
ಐಜ್ವಾಲ್: ಮಿಜೋರಾಂ ನಲ್ಲಿ ಕಾಡು ಅಣಬೆ ಸೇವನೆ ಮಾಡಿದ ಓರ್ವ ಬಾಲಕ ಸೇರಿದಂತೆ ಮೂರ್ವರು ಸಾವನ್ನಪ್ಪಿದ್ದರೆ, ನಾಲ್ವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಮಿಟ್ ಜಿಲ್ಲೆಯಲ್ಲಿ ಒಂದೇ ಕುಟುಂಬದವರು ಕಾಡು ಅಣಬೆ ಸೇವಿಸಿದ್ದು ಮೂವರು ಮೃತಪಟ್ಟಿದ್ದಾರೆ ಇಬ್ಬರು ಮಕ್ಕಳು, ಓರ್ವ ಮಹಿಳೆ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಣಬೆಗಳನ್ನು ಕಾಡಿನಿಂದ ತರಲಾಗಿತ್ತು, ಬಹುಶಃ ಅದು ವಿಷಯಕಾರಿಯಾಗಿರಬೇಕು ಇಲ್ಲವೇ ಸರಿಯಾಗಿ ಬೇಯಿಸದ ಕಾರಣ ಈ ಅವಗಢ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ 8 ವರ್ಷದ ಒಂದು ಮತ್ತು, 10 ವರ್ಷದ ಒಬ್ಬ ಬಾಲಕ ಮತ್ತು 34ರ ಹರೆಯದ ಯುವಕ ಸೇರಿದ್ದಾರೆ.