ಕರ್ನಾಟಕ

ಪ್ರತಿಷ್ಠಿತ ವಿವಿಗಳ ನಕಲಿ ಪ್ರಮಾಣ ಪತ್ರ ಮಾರಾಟ: ಮಹಿಳೆಯೊಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು

Pinterest LinkedIn Tumblr

arrest

ಬೆಂಗಳೂರು: ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿಯ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಜಯನಗರ 4ನೇ ಟಿ ಬ್ಲಾಕ್ ನಲ್ಲಿರುವ ‘ವಿಜೇತ ಕಾಲೇಜ್ ಅಡ್ಮಿಷನ್ ಕಂ ಇನ್ ಫಾರ್ಮೆಷನ್ ಸೆಂಟರ್’ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಸಫಿಯಾ ಬಾನು(25) ಎಂಬುವವರನ್ನು ಬಂಧಿಸಿದ್ದಾರೆ. ಸಫಿಯಾ ಬಾನು ಬೆಂಗಳೂರಿನ ಬನ್ನೆರಘಟ್ಟ ರಸ್ತೆಯಲ್ಲಿರುವ ಅರಕೆರೆ ನಿವಾಸಿ.

ಇನ್ನು ಪ್ರಕರಣದ ಪ್ರಮುಖ ಆರೋಪಿ ರವಿರಾಜ್ ತಲೆ ಮರೆಸಿಕೊಂಡಿದ್ದಾನೆ. ವಿಜೇತ ಕಾಲೇಜು ಎಂಬ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ರವಿರಾಜ್ ನಕಲಿ ಶೈಕ್ಷಣಿಕ ಪ್ರಮಾಣಪತ್ರ ದಂಧೆ ನಡೆಸುತ್ತಿದ್ದರು. ಇವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ನಕಲಿ ಪ್ರಮಾಣ ಮಾರಾಟ ಮಾಡುತ್ತಿದ್ದರು.

ಆರೋಪಿಗಳು ಬಿಎ, ಬಿಕಾಂ, ಬಿಎಸ್ ಸಿ, ಬಿಬಿಎಂ, ಎಲ್ ಎಸ್ ಸಿ, ಎಂಎಸ್ ಸಿ, ಎಂಕಾಂ, ಎಂಬಿಎ, ಎಂಸಿಎ, ಎಲ್ ಎಲ್ ಎಂ, ಎಂಎ ಸೇರಿದಂತೆ ಇತರೆ ಕೋರ್ಸ್ ಗಳ ನಕಲಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡಿದ್ದಾರೆ.

ನಕಲಿ ಪ್ರಮಾಣ ಪತ್ರ, ಅಂಕಪಟ್ಟಿ, ಘಟಿಕೋತ್ಸವದ ಪ್ರಮಾಣಪತ್ರಗಳನ್ನು ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪ್ರಮಾಣಪತ್ರಗಳನ್ನು ನೀಡಲು ರು.30 ಸಾವಿರದಿಂದ ರು.50 ಸಾವಿರ ಹಣವನ್ನು ಪಡೆಯುತ್ತಿದ್ದರು.

ಛತ್ತೀಸ್ ಗಡದಲ್ಲಿರುವ ಸಿವಿ ರಾಮನ್ ವಿಶ್ವವಿದ್ಯಾಲಯ, ಯುಎಸ್ ಎ, ಮಧುರೈ ಕಾಮರಾಜ ಯೂನಿವರ್ಸಿಟಿ(ಎಂಕೆಯು), ಕುಪ್ಪಂ, ಮುಂಬೈನಲ್ಲಿರುವ ರಾಷ್ಟ್ರೀಯ ವಿಶ್ವ ವಿದ್ಯಾಪೀಠ, ದ್ರಾವಿಡಿಯನ್ ವಿಶ್ವವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ನಕಲಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Write A Comment