ಕರ್ನಾಟಕ

ಹುಬ್ಬಳ್ಳಿ: ಸಿಡಿಲು ಸಹಿತ ಬಿರುಸಿನ ಮಳೆ

Pinterest LinkedIn Tumblr

hub-rain1ಹುಬ್ಬಳ್ಳಿ: ಮುಕ್ಕಾಲು ಗಂಟೆಗೂ ಅಧಿಕ ಕಾಲ ಗುಡುಗು, ಸಿಲಿಲು ಸಹಿತ ಸುರಿದ ಬಿರುಸಿನ ಮಳೆಯು ನಗರಕ್ಕೆ ತಂಪನ್ನೆರೆಯಿತು.
ಬಿರು ಬಿಸಿಲಿಗೆ ಬಸವಳಿದ ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಮಳೆಯ ನಿರೀಕ್ಷೆ ಅಷ್ಟಾಗಿ ಇಲ್ಲದಿದ್ದುದರಿಂದ ಜನರು ಮಳೆಯಿಂದ ರಕ್ಷಣೆ ಪಡೆಯಲು ಕೊಡೆ, ಜರ್ಕಿನ್‌ಗಳನ್ನು ತಂದಿರಲಿಲ್ಲ. ಅನಿವಾರ್ಯವಾಗಿ ಮಳೆಯಲ್ಲಿ ನೆನೆದರು. ಇನ್ನು ಕೆಲವರು ರಸ್ತೆ ಅಕ್ಕ ಪಕ್ಕದ ಅಂಗಡಿ, ಮನೆಗಳ ಆಶ್ರಯ ಪಡೆದರು.
ಬಿರುಸಿನ ಮಳೆಯಿಂದಾಗಿ ರಸ್ತೆಗಳ ಪಕ್ಕದಲ್ಲಿ ನೀರು ನಿಂತುಕೊಂಡಿತ್ತು.

Write A Comment