ಮನೋರಂಜನೆ

ಪ್ರತ್ಯೂಷ ಆತ್ಮಹತ್ಯೆಗೆ ಅರ್ಥವಿಲ್ಲ, ಹೇಮಾ ಮಾಲಿನಿ

Pinterest LinkedIn Tumblr

Hema-Malini-e1459861312437-720x340ಮುಂಬೈ: ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಅರ್ಥವಿಲ್ಲ ಎಂದು ಹಿರಿಯ ನಟಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ.

ಟ್ವೀಟರ್​ನಲ್ಲಿ ಪ್ರಕರಣದ ಕುರಿತು ಬರೆದಿರುವ ಹೇಮ ಮಾಲಿನಿ, ಜೀವನವನ್ನು ಎದುರಿಸದೆ ಪಲಾಯನ ಮಾಡುವವರನ್ನು ಬೆಂಬಲಿಸಕೂಡದು. ಕಷ್ಟ, ಅನ್ಯಾಯಗಳನ್ನು ಮೆಟ್ಟಿ ನ್ಲಿಲುವ ಧೈರ್ಯಶಾಲಿಗಳಿಗೆ ವಿಶ್ವ ಮಣೆ ಹಾಕಬೇಕು ಎಂದಿದ್ದಾರೆ.

ದೇವರು ನಮಗೆ ಜೀವವನ್ನು ಕೊಟ್ಟಿರುವುದು ಬದುಕಲು, ಅದನ್ನು ಹತ್ಯೆಗೈಯುವುದಕ್ಕಲ್ಲ. ಜೀವನದ ಎಲ್ಲಾ ಕಷ್ಟಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು 67 ವರ್ಷದ ಹೇಮಾ ಮಾಲಿನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿಕಾ ವಧು ಧಾರಾವಾಹಿಯಲ್ಲಿ ನಟಿಸಿದ್ದ 24 ವರ್ಷದ ಪ್ರತ್ಯೂಷ ಏಪ್ರಿಲ್ 1ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಿಯಕರ ರಾಹುಲ್ ರಾಜ್ ಸಿಂಗ್ ಜತೆಗಿನ ಸಂಬಂಧ ಆಕೆಯ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Write A Comment