ರಾಷ್ಟ್ರೀಯ

ಮಂದಿರ ವಿವಾದ, ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Pinterest LinkedIn Tumblr

SC-Webನವದೆಹಲಿ: ರಾಮಮಂದಿಂರ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಸುಬ್ರಮಣಿಯನ್ ಸ್ವಾಮಿ ಈ ಹಿಂದಿನ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ತುರ್ತು ವಿಚಾರಣೆ ಸಾಧ್ಯವಾಗದು ಎಂದು ಸ್ಪಷ್ಟಪಡಿಸಿರುವ ಕೋರ್ಟ್, ವಿಚಾರಣೆಯನ್ನು ನ್ಯಾಯಪೀಠದ ಮುಂದೆ ಇರಿಸಲಾಗುವುದು ಎಂದಿದೆ.

ವಿವಾದಾತ್ಮಕ ಕಟ್ಟಡ ಧ್ವಂಸಮಾಡಿದ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣ ಆಗಬೇಕು. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆಗಾಗಿ ಕೈಗೆತ್ತಿಕೊಳ್ಳಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಮನವಿ ಮಡಿದ್ದರು.

ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸಾರ್ವಜನಿಕ ಉದ್ದೇಶಗಳಾದ ರಸ್ತೆ ಮತ್ತಿತರ ನಿರ್ಮಾಣಕ್ಕಾಗಿ ಮಸೀದಿ ಸ್ಥಳಾಂತರಿಸಬಹುದು. ಆದರೆ ದೇವಸ್ಥಾನಗಳು ಒಮ್ಮೆ ನಿರ್ಮಾಣವಾದರೆ ಕೆಡವುವಂತಿಲ್ಲ ಎಂಬ ನಿಯಮವಿದೆ ಎಂಬುದನ್ನು ಸ್ವಾಮಿ ತಮ್ಮ ಅರ್ಜಿಯಲ್ಲಿ ಸಮರ್ಥಿಸಿದ್ದರು.

Write A Comment