ರಾಷ್ಟ್ರೀಯ

ದೇಶದಲ್ಲಿ ಕ್ರಿಕೆಟ್ ಉತ್ತೇಜನಕ್ಕೆ ಬಿಸಿಸಿಐ ಕೊಡುಗೆ ಶೂನ್ಯ: ಸುಪ್ರೀಂ

Pinterest LinkedIn Tumblr

suprimcourtನವದೆಹಲಿ: ಶ್ರೀಮಂತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ದೇಶದಲ್ಲಿ ಕ್ರಿಕೆಟ್​ಗೆ ಅಂಟಿರುವ ಕಳಂಕ ಹೋಗಲಾಡಿಸಲು ಹಾಗೂ ಆಟವನ್ನು ಉತ್ತೇಜಿಸಲು ಬಿಸಿಸಿಐ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಲೋಧಾ ಸಮಿತಿ ನೀಡಿದ ವರದಿಯನ್ನು ಯಾವ ರೀತಿಯಲ್ಲಿ ಜಾರಿಗೆ ತರಲು ಸಾಧ್ಯ ಎನ್ನುವುದರ ಕುರಿತು ಬಿಸಿಸಿಐ ಇಂದು ಸುಪ್ರೀಂಗೆ ವಿವರ ನೀಡಿತು. ಈ ವೇಳೆ ಸುಪ್ರೀಂ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದ ಅನುದಾನದ ಕುರಿತು ಕೋರ್ಟ್ ಮಾಹಿತಿ ಕೇಳಿದ್ದು, ಕಳೆದ ಐದು ವರ್ಷದಲ್ಲಿ 11 ರಾಜ್ಯಗಳಿಗೆ ಯಾವುದೇ ರೀತಿಯ ಅನುದಾನ ನೀಡದಿರುವುದು ದಾಖಲೆಗಳಳಿಂದ ಬಹಿರಂಗವಾಗಿದೆ.
ಬಿಸಿಸಿಐ ಗುಜರಾತ್ ಒಂದಕ್ಕೆ ಬರೋಬ್ಬರಿ 66 ಕೋಟಿ ರುಪಾಯಿ ಅನುದಾನ ನೀಡಿದ್ದು, ಹನ್ನೊಂದು ಈಶಾನ್ಯ ರಾಜ್ಯಗಳಿಗೆ ಕೇವಲ 50 ಲಕ್ಷ ರುಪಾಯಿ ಅನುದಾನ ನೀಡಿರುವ ಕುರಿತು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರು ಪ್ರಶ್ನಿಸಿದರು. ಅಲ್ಲದೆ ಹಣ ನೀಡುವಾಗ ಯಾವುದೇ ತಾರ್ಕಿಕ ನಿರ್ಣಯ ಕೈಗೊಳ್ಳದೆ ಹಣ ವರ್ಗಾವಣೆ ಮಾಡುವುದು ಸಹ ಭ್ರಷ್ಟಾಚಾರ ಎಂದು ಕಿವಿ ಹಿಂಡಿದರು.
ಇಂಡಿಯನ್ ಪ್ರೀಮಿಯಮ್ ಲೀಗ್​ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ 2015, ಜನವರಿಯಲ್ಲಿ ಲೋಧಾ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ನೀಡಿದ ವರದಿಯನ್ನು ಜಾರಿ ಮಾಡಿದರೆ ಬಿಸಿಸಿಐಗೆ ಕೋಟ್ಯಂತರ ರುಪಾಯಿ ಹಾನಿಯಾಗುತ್ತದೆ ಎಂದು ಬಿಸಿಸಿಐ ಲೋಧಾ ವರದಿಯ ಕುರಿತು ಮೇಲ್ಮನವಿ ಸಲ್ಲಿಸಿದೆ.

Write A Comment