ಮುಂಬೈ

ಹಣ ಪ್ರಸರಣದಲ್ಲಿ ಗಣನೀಯ ಹೆಚ್ಚಳ: ರಾಜನ್

Pinterest LinkedIn Tumblr

Rajan Of RBIಮುಂಬೈ (ಪಿಟಿಐ): ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಹಣ ಪ್ರಸರಣ ಹೆಚ್ಚಿದ್ದು, ಈ ಬೆಳವಣಿಗೆ ‘ಸಾಧಾರಣ ಸಂಗತಿ’ ಅಲ್ಲ ಎಂದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್, ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗ ಅಗತ್ಯವಿದೆ ಎಂದು ಮಂಗಳವಾರ ತಿಳಿಸಿದ್ದಾರೆ.
ಪ್ರಸ್ತಕ ಆರ್ಥಿಕ ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಿ ಅವರು ಮಾತನಾಡಿದರು.
‘ಚುನಾವಣೆಯ ವೇಳೆಗೆ ಜನರ ಕೈಯಲ್ಲಿ ಸಹಜವಾಗಿಯೇ ದುಡ್ಡು ಹೆಚ್ಚುತ್ತದೆ. ಇದಕ್ಕೆ ಕಾರಣ ಏನಿರಬಹುದು ಎಂದು ನೀವು ಊಹಿಸಬಹುದು, ನಾವೂ ಊಹಿಸಬಹುದು. ಸದ್ಯ ಜನರ ಕೈಯಲ್ಲಿರುವ ಹಣದ ಪ್ರಮಾಣ ₹60 ಸಾವಿರ ಕೋಟಿಗೂ ಅಧಿಕ. ಇದು ಸಾಧಾರಣ ಸಂಗತಿ ಅಲ್ಲ’ ಎಂದರು.
ಅಲ್ಲದೇ, ‘ಈ ಹೆಚ್ಚಳ ಬರೀ ಚುನಾವಣೆಯ ನಡೆಯುತ್ತಿರುವ ರಾಜ್ಯಗಳಲ್ಲಿ ಮಾತ್ರವೇ ಇಲ್ಲ. ನೆರೆಯ ರಾಜ್ಯಗಳಲ್ಲೂ ಇದೆ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Write A Comment