ಕರ್ನಾಟಕ

ಯುಗಾದಿಗೆ ನಿಖಿಲ್ ಕುಮಾರ್ ನಟನೆಯ ‘ಜಾಗ್ವಾರ್’ ಮೋಶನ್ ಪೋಸ್ಟರ್ ಬಿಡುಗಡೆ

Pinterest LinkedIn Tumblr

Jaguar1

ಬೆಂಗಳೂರು: ಏಪ್ರಿಲ್ 11 ರಿಂದ ಮುಂದಿನ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ನಿಖಿಲ್ ಕುಮಾರ್ ನಟನೆಯ ‘ಜಾಗ್ವಾರ್’ ಚಿತ್ರತಂಡ ಯುಗಾದಿಗೆ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಿದೆಯಂತೆ. ವರದಿಗಳ ಪ್ರಕಾರ ಸಿನೆಮಾದಲ್ಲಿ ನಟನ ಮತ್ತೊಂದು ಛಾಯೆ ಈ ಪೋಸ್ಟರ್ ನಲ್ಲಿ ಕಾಣಿಸಲಿದೆಯಂತೆ.

ಇದರ ಬಗ್ಗೆ ವಿವರಿಸುವ ನಟ “ಶೀಘ್ರದಲ್ಲೇ ಫೈಟಿಂಗ್ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕಾಗಿ ‘ಜಾಗ್ವಾರ್’ ಲುಕ್ ಹೊಂದಬೇಕಾಗುತ್ತಿದೆ. ಇಂದಿನ ತಂತ್ರಜ್ಞಾನದಲ್ಲಿ ಯಾರಾದರೂ ಅದನ್ನು ಕ್ಲಿಕಿಸಿ, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದು ಸುಲಭ. ಅದಕ್ಕಾಗಿ ನಾವೇ ಅಧಿಕೃತವಾಗಿ ಈ ನೋಟವನ್ನು ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ” ಎನ್ನುತ್ತಾರೆ ನಿಖಿಲ್.

ಪಾತ್ರದ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡದ ನಿಖಿಲ್ “ಒಂದು ಛಾಯೆಯಲ್ಲಿ ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೆ ಮತ್ತೊಂದು ಶೇಡ್ ನಲ್ಲಿ ಯಾರೂ ಗುರುತಿಸದಂತ ಲುಕ್ ನಲ್ಲಿರುತ್ತೇನೆ. ಅವನು ಸೂಪರ್ ಹೀರೋ ಅಲ್ಲ, ನೈಜತೆಗೆ ಹತ್ತಿರವಾದವನೇ” ಎಂದು ತಿಳಿಸುತ್ತಾರೆ ನಿಖಿಲ್.

ತಮ್ಮ ತಾಯಿಯ ಆಸೆಯನ್ನು ಪೂರೈಸುತ್ತಿರುವುದಾಗಿ ತಮಾಷೆ ಮಾಡುವ ನಿಖಿಲ್ “ನಾನು ವೈದ್ಯ ಅಥವಾ ಎಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದರು ನನ್ನ ತಾಯಿ. ಈಗ ಅಂತಹ ಪಾತ್ರ ಮಾಡಿ ಅವರ ಆಸೆ ಪೂರೈಸುತ್ತಿದ್ದೇನೆ. ಎಲ್ಲ ಪಾತ್ರಗಳನ್ನು ಮಾಡಬಹುದಾದ ಅದೃಷ್ಟವಂತರು ನಾವು ಎಂದು ಅವರಿಗೆ ಹೇಳುತ್ತಿರುತ್ತೇನೆ” ಎಂದು ನಗುತ್ತಾರೆ.
ಈ ಮಧ್ಯೆ ನಟನ ಪೋಷಕ ಪಾತ್ರಕ್ಕೆ ಶರತ್ ಕುಮಾರ್ ಮತ್ತು ಮೀನಾ ಆಯ್ಕೆಯಾಗಿದ್ದಾರೆ.

Write A Comment