ರಾಷ್ಟ್ರೀಯ

ಸೌದಿ ದೊರೆ ಕಾಲಿಗೆ ಮೋದಿ ಬೀಳುತ್ತಿರುವ ತಿರುಚಿದ ನಕಲಿ ಫೋಟೋ ಪ್ರಕಟಿಸಿದ್ದ ಪತ್ರಕರ್ತನ ವಿರುದ್ಧ ದೂರು

Pinterest LinkedIn Tumblr

mm

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಸ್ಸಾಗಿದ್ದಾರೆ. ಆದರೆ ಸಿಎನ್‌ಎನ್‌- ಐಬಿಎನ್‌ ಸುದ್ದಿವಾಹಿನಿಯ ಪತ್ರಕರ್ತ ರಾಘವ್‌ ಚೋಪ್ರಾ ಅವರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರ ಪಾದ ಸ್ಪರ್ಶಿಸಲು ಬಗ್ಗಿರುವ ರೀತಿಯಲ್ಲಿರುವ ತಿರುಚಿದ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ ವಿವಾದಕ್ಕೆ ಸಿಲುಕಿದ್ದಾರೆ.

ರಾಘವ್‌ ಚೋಪ್ರಾ ಅವರ ಕೃತ್ಯ ಬಗ್ಗೆ ಬಿಜೆಪಿ ಸಂಸದ ಮಹೇಶ್‌ ಗಿರಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ತಂದಿದ್ದರು. ಬಳಿಕ ಬಿಜೆಪಿಯ ತಾಂತ್ರಿಕ ಘಟಕ ದೆಹಲಿ ಸೈಬರ್ ಪೊಲೀಸರಿಗೆ ದೂರು ನೀಡಿದೆ.

ಈ ಹಿಂದೆ ಬಿಜೆಪಿ ವರಿಷ್ಠ ನಾಯಕ ಅಡ್ವಾಣಿ ಕಾಲಿಗೆ ಮೋದಿ ಬೀಳಲು ಬಗ್ಗಿರುವ ಫೋಟೋ ಬಳಸಿ, ಅಡ್ವಾಣಿ ಜಾಗದಲ್ಲಿ ಸಲ್ಮಾನ್‌ ಅವರನ್ನು ಈ ಫೋಟೋದಲ್ಲಿ ಚಿತ್ರಿಸಲಾಗಿತ್ತು. ಇದನ್ನು ರಾಘವ್‌ ಚೋಪ್ರಾ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಈ ರೀತಿ ಫೋಟೋ ಪ್ರಕಟಿಸಿದ್ದಕ್ಕೆ ಪತ್ರಕರ್ತ ರಾಘವ್‌ ಚೋಪ್ರಾ ವಿಷಾದ ವ್ಯಕ್ತಪಡಿಸಿದ್ದಾರೆ.

Write A Comment