ಅಂತರಾಷ್ಟ್ರೀಯ

ಏಪ್ರಿಲ್ 21ರಂದು ಆಸ್ಟ್ರೇಲಿಯಾದಲ್ಲಿ ‘ಚಕ್ರವ್ಯೂಹ’ ಪ್ರೀಮಿಯರ್; ಏಪ್ರಿಲ್ 22ಕ್ಕೆ ಜಾಗತಿಕ ಬಿಡುಗಡೆ

Pinterest LinkedIn Tumblr

Chakravyuha

ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಚಕ್ರವ್ಯೂಹ’ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪುನೀತ್ ಅವರ ತಂದೆ ವರನಟ ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24 ಕ್ಕೂ ಎರಡು ದಿನ ಮುಂಚಿತವಾಗಿ, ಅಂದರೆ ಏಪ್ರಿಲ್ 22 ರಂದು ಸಿನೆಮಾ ಬಿಡುಗಡೆಯಾಗಲಿದೆ.

ವಿಶ್ವದಾದ್ಯಂತ ಬಿಡುಗಡೆ ಕಾಣಲಿರುವ ಈ ಸಿನೆಮಾಗೆ ಏಪ್ರಿಲ್ 21ರಂದು ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ, ಆದರೆ ಪ್ರದರ್ಶನದ ಪ್ರದೇಶ ಇನ್ನೂ ಅಂತಿಮಗೊಳ್ಳಬೇಕಿದೆ. ಸಂತೋಶ್ ಆನಂದರಾಮ್ ನಿರ್ದೇಶಿಸುತ್ತಿರುವ ‘ರಾಜಕುಮಾರ’ ಸಿನೆಮಾದ ಚಿತ್ರೀಕರಣಕ್ಕಾಗಿ ಏಪ್ರಿಲ್ ೧೪ ಕ್ಕೆ ಆಸ್ಟ್ರೇಲಿಯಾಕ್ಕೆ ತೆರಳಲಿರುವ ಪುನೀತ್, ಪ್ರೀಮಿಯರ್ ನಲ್ಲಿ ಭಾಗವಹಿಸಲಿದ್ದಾರೆ. “ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಹಾಂಕಾಂಗ್, ಸಿಂಗಾಪೂರ್, ಮಲೇಶಿಯಾ, ಸೌದಿ ಅರೇಬಿಯಾ, ಅಮೇರಿಕಾ, ಕೆನಡಾ ಸೇರಿದಂತೆ ೫೦ ಕ್ಕೂ ಹೆಚ್ಚು ದೇಶಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಅಲ್ಲದೆ ಭಾರತದಲ್ಲಿ ಚೆನ್ನೈ, ಪುಣೆ, ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲೂ ಬಿಡುಗಡೆಯಾಗಲಿದೆ” ಎಂದು ವಿವರಿಸುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.

ಎನ್ ಕೆ ಲೋಹಿತ್ ನಿರ್ಮಿಸುತ್ತಿರುವ ಈ ಸಿನೆಮಾದ ನಿರ್ದೇಶಕ ಎಂ ಸರವಣನ್. ಎಸ್ ಎಸ್ ತಮನ್ ಸಂಗೀತ ನೀಡಿದ್ದು, ರಚಿತಾ ರಾಮ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳು ನಟ ಅರುಣ್ ವಿಜಯ್ ಖಳ ನಾಯಕನಾಗಿ ಕಾಣಿಸಿಕೊಂಡಿದ್ದರೆ. ಸಾಧು ಕೋಕಿಲಾ ಮತ್ತು ರಂಗಾಯಣ ರಘು ಕೂಡ ನಟಿಸಿದ್ದಾರೆ.

ತೆಲುಗು ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಸಿನೆಮಾದಲ್ಲಿ ತಲಾ ಒಂದು ಹಾಡನ್ನು ಹಾಡಿದ್ದು, ಸಿನೆಮಾಗೆ ಒಳ್ಳೆಯ ಪ್ರಚಾರ ತಂದುಕೊಟ್ಟಿತ್ತು. ಆಡಿಯೋ ವಿತರಣೆ ಕೂಡ ನಿರ್ಮಾಪಕರಿಗೆ ಒಳ್ಳೆಯ ಹಣಗಳಿಸಿಕೊಟ್ಟಿದೆ ಎಂದು ತಿಳಿದುಬಂದಿದೆ.

Write A Comment