ಅಂತರಾಷ್ಟ್ರೀಯ

ಪತ್ರಕರ್ತರ ಮುಂದೆ ದುರ್ವರ್ತನೆ ತೋರಿದ ಸ್ಯಾಮುಯೆಲ್ಸ್..!

Pinterest LinkedIn Tumblr

Samuels

ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೋಘ 82 ರನ್ ಗಳನ್ನು ಸಿಡಿಸಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿಂಡೀಸ್ ಬ್ಯಾಟ್ಸಮನ್ ಮರ್ಲಾನ್ ಸಾಮುಯೆಲ್ಸ್ ಇದೀಗ ಮಾಧ್ಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಾಮುಯೆಲ್ಸ್ ಭಂಗಿ ನಿಜಕ್ಕೂ ಒಂದು ರೀತಿ ದುರ್ನಡತೆಯಾಗಿತ್ತು ಎಂದು ಹೇಳಲಾಗುತ್ತಿದೆ. ಸುದ್ದಿಗೋಷ್ಠಿಗೆ ಆಗಮಿಸಿದ ಸ್ಯಾಮುಯೆಲ್ಸ್ ಬರುತ್ತಿದ್ದಂತೆಯೇ ತಮ್ಮ ಫೋನ್ ಅನ್ನು ಟೇಬಲ್ ಮೇಲೆ ವಿಡಿಯೋ ಚಿತ್ರೀಕರಿಸುವ ಭಂಗಿಯಲ್ಲಿರಿಸಿ ಬಳಿಕ ತಮ್ಮ ಎರಡೂ ಕಾಲುಗಳನ್ನು ಟೇಬಲ್ ಮೇಲೆ ಹಾಕಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕಾಲಿಗೆ ಧರಿಸಿದ್ದ ಪ್ಯಾಡ್ ಕೂಡ ಬಿಚ್ಚದೇ ಕಾಲ ಮೇಲೆ ಕಾಲು ಹಾಕಿ ಕುಳಿತ ವಿಂಡೀಸ್ ಆಟಗಾರನ ಈ ಭಂಗಿ ಇದೀಗ ಪತ್ರಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ಯಾಮುಯೆಲ್ಸ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ವಿಂಡೀಸ್ ಆಟಗಾರ ಈ ಕೇರ್ ಲೆಸ್ ವರ್ತನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಸ್ಯಾಮುಯೆಲ್ಸ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಆಟಗಾರರ ಈ ದುರ್ವರ್ತನೆಯೇ ಅವರ ಸಂಭಾವನೆ ವಿವಾದ ತಾರಕ್ಕೇರುವಂತೆ ಮಾಡಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಕೆಲವರು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನದಿಂದ ಸಂಪಾದಿಸಿದ್ದ ಗೌರವವನ್ನು ಸ್ಯಾಮುಯೆಲ್ಸ್ ತಮ್ಮ ಈ ಒಂದೇ ಒಂದು ವರ್ತನೆಯಿಂದ ಕಳೆದುಕೊಂಡು ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ವೃತ್ತಿಪರ ಆಟಾಗರರಿಗೆ ಇಂತಹ ವರ್ತನೆ ತಕ್ಕುದಲ್ಲ ಎಂದು ಟ್ವೀಟಿಸಿದ್ದಾರೆ.

ಒಟ್ಟಾರೆ ಸ್ಯಾಮುಯೆಲ್ಸ್ ಅವರ ಈ ವರ್ತನೆ ನಿಜಕ್ಕೂ ಖಂಡನೀಯವಾಗಿದ್ದು, ವಿಂಡೀಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ಆಟಗಾರರ ವಿವಾದ ಇರುವುದು ನಿಜ. ಆದರೆ ಸ್ಯಾಮುಯೆಲ್ಸ್ ತಮ್ಮ ಈ ವರ್ತನೆ ಮೂಲಕ ಯಾರಿಗೆ? ಯಾವ ಸಂದೇಶ ನೀಡಲು ಮುಂದಾಗಿದ್ದಾರೆಯೋ ತಿಳಿಯದು.

ಮೈದಾನದಲ್ಲಿಯೂ ಪಂದ್ಯದ ಕೊನೆಯ ಓವರ್ ವೇಳೆ ಇಂಗ್ಲೆಂಡ್ ಆಟಗಾರ ಬೆನೆ ಸ್ಟೋಕ್ಸ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದ ಸ್ಯಾಮುಯೆಲ್ಸ್ ಐಸಿಸಿಯಿಂದ ದಂಡ ಹಾಕಿಸಿಕೊಂಡಿದ್ದಾರೆ.

Write A Comment