ಕರ್ನಾಟಕ

ಬಾಹುಬಲಿ ಪ್ರಬಾಸ್ ಗೆ ಥಿಯೇಟರ್ ಮಾಲೀಕರಿಂದ ವಿಶೇಷ ಮನವಿ…!

Pinterest LinkedIn Tumblr

Baahubali

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ದೂಳೆಬ್ಬಿಸಿದ್ದ ಬಾಹುಬಲಿ ಚಿತ್ರಕ್ಕೆ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.

ಇನ್ನು ಬಾಹುಬಲಿ ಚಿತ್ರದ ಪ್ರಮುಖ ಪಾತ್ರಧಾರಿ ಪ್ರಬಾಸ್ ಗೆ ಕೆಲ ಚಿತ್ರಮಂದಿರದ ಮಾಲೀಕರು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಚಿತ್ರ ತೆರೆಗೆ ಬಂದು 10 ತಿಂಗಳು ಕಳೆದರು ಇನ್ನು ಚಿತ್ರವನ್ನು ಪ್ರದರ್ಶನ ಮಾಡುತ್ತಿರುವ ಮಾಲೀಕರು ಪ್ರಭಾಗೆ ಚಿತ್ರಮಂದಿರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರಂತೆ.

ದೇಶಾದ್ಯಂತ ಕೆಲ ಚಿತ್ರಮಂದಿರಗಳಲ್ಲಿ ಚಿತ್ರ ಇನ್ನು ಪ್ರದರ್ಶನ ಕಾಣುತ್ತಿದ್ದು, ಆ ಚಿತ್ರಮಂದಿರದ ಮಾಲೀಕರು ಚಿತ್ರಮಂದಿರಕ್ಕೆ ಭೇಟಿ ನೀಡುವಂತೆ ಪತ್ರ ಬರೆದಿರುವುದು ಪ್ರಬಾಸ್ ಗೆ ಆಶ್ಚರ್ಯ ಉಂಟು ಮಾಡಿದೆಯೆಂತೆ ಹೀಗಂತ ಪ್ರಬಾಸ್ ನ ಆತ್ಮೀಯ ಮೂಲಗಳಿಂದ ತಿಳಿದುಬಂದಿದೆ.

ಚಿತ್ರ ಬಿಡುಗಡೆಯಾಗಿ ತಿಂಗಳುಗಳೆ ಕಳೆದರು ಚಿತ್ರ ಇನ್ನು ಪ್ರದರ್ಶನ ಕಾಣುತ್ತಿರುವುದು ಸಂತೋಷದಾಯಕ. ಅದೇ ರೀತಿ ಚಿತ್ರಮಂದಿರದ ಮಾಲೀಕರು ಪತ್ರ ಬರೆದು ಭೇಟಿ ನೀಡುವಂತೆ ಮನವಿ ಮಾಡಿರುವುದು ಚಿತ್ರ ನಟನೊಬ್ಬನಿಗೆ ಆತ್ಮಸ್ಥೈರ್ಯ ತುಂಬಿದ್ದಂತೆ. ಚಿತ್ರಮಂದಿರದ ಮಾಲೀಕರು ಚಿತ್ರರಂಗದ ಪ್ರಮುಖ ಭಾಗವಾಗಿದ್ದಾರೆ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ.

Write A Comment