ಮನೋರಂಜನೆ

ಕೊಹ್ಲಿಗೆ ಪ್ರಪೋಸ್ ಮಾಡಿದ ಪಾಕಿಸ್ತಾನದ ಕಂದಿಲ್…ಅನುಷ್ಕಾಳ ಬಗ್ಗೆ ಹೇಳಿದ್ದೇನು..?

Pinterest LinkedIn Tumblr

viart-kandil

ಮುಂಬೈ: ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿಗೆ ಈಗ ಮತ್ತೊಂದು ಲವ್ ಪ್ರಪೋಸಲ್‍ಲ್ ಬಂದಿದೆ. ಅನುಷ್ಕಾಳನ್ನು ಬಿಡು, ನನ್ನನ್ನು ಲವ್ ಮಾಡು ಅಂತ ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೂಚ್ ವೀಡಿಯೋ ಸಂದೇಶ ಕಳುಹಿಸಿದ್ದಾಳೆ.

ಕಂದಿಲ್ ಬಲೂಚ್‍ಳ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಡಿಯಾ ಪಾಕಿಸ್ತಾನ ಮ್ಯಾಚ್ ಸಂದರ್ಭದಲ್ಲಿ ವಿರಾಟ್ ಆಟವನ್ನು ನೋಡಿ ಈಕೆ ಫಿದಾ ಆಗಿದ್ದಾಳಂತೆ. ಆದರೆ ಈ ವೀಡಿಯೋ ಪಬ್ಲಿಸಿಟಿ ಗಿಮಿಕ್ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

ಐಸಿಸಿ ಟಿ20 ವಲ್ರ್ಡ್ ಕಪ್ ಸಂದರ್ಭದಲ್ಲಿ ಶಾಹೀದ್ ಅಫ್ರಿದಿಗಾಗಿ ಸ್ಟ್ರಿಪ್ ಡ್ಯಾನ್ಸ್ ಮಾಡ್ತೀನಿ ಅಂತ ಹೇಳಿ ಸುದ್ದಿಗೆ ಬಂದಿದ್ದ ಇದೇ ಕಂದಿಲ್ ಈಗ ತನ್ನ ಹಳೇ ಪ್ರಚಾರದ ಗಿಮಿಕ್‍ಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾಳೆ.

Write A Comment