ಕರ್ನಾಟಕ

ಸಿಎಂ ಪದಕ ನಿರಾಕರಿಸಿದ ಪೇದೆ ಪತ್ನಿ

Pinterest LinkedIn Tumblr

pede

ಬೆಂಗಳೂರು: ನಗರದಲ್ಲಿ ನಡೆದ ಮುಖ್ಯಮಂತ್ರಿ ಪದಕ ವಿತರಣೆ ಸಮಾರಂಭದಲ್ಲಿ ಮೃತ ಪೇದೆಯೊಬ್ಬರ ಪತ್ನಿ ಚೈತ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪದಕ ನಿರಾಕರಿಸಿದ ಘಟನೆ ನಡೆಯಿತು.

ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಚಾಮರಾಜನಗರ ಮೂಲದ ಮಹದೇವಸ್ವಾಮಿ ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕ ಗುಂಡು ತಗುಲಿ ೨೦೧೫ರ ಜೂನ್‌ನಲ್ಲಿ ಮೃತಪಟ್ಟಿದ್ದರು.ಅವರಿಗೆ ಮರಣೋತ್ತರವಾಗಿ ಮುಖ್ಯಮಂತ್ರಿಗಳ ಪದಕ ಘೋಷಿಸಲಾಗಿತ್ತು.

ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ಮುಖ್ಯಮಂತ್ರಿಗಳ ಪದಕ ಸಮಾರಂಭದಲ್ಲಿ ಪತಿಯ ಪರವಾಗಿ ಪದಕ ಸ್ವೀಕರಿಸಲು ಅವರ ಪತ್ನಿ ಚೈತ್ರ ಅವರು ಆಗಮಸಿದ್ದರು.

ನಿಗಧಿಯಂತೆ ಪದಕ ಪ್ರದಾನ ಸಮಾರಂಭದಲ್ಲಿ ಕೊನೆಯಲ್ಲಿ ೧ ವರ್ಷದ ಮಗವಿನೊಂದಿಗೆ ವೇದಿಕೆಗೆ ಆಗಮಿಸಿದ ಚೈತ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ನೀಡಲು ಹೋದಾಗ ಅದನ್ನು ಪಡೆಯಲು ನಿರಾಕರಿಸಿದರು.

ವದಿಕೆಯಲ್ಲೇ ಮುಖ್ಯಮಂತ್ರಿಗಳು ಗೃಹಸಚಿವರು ಪೊಲೀಸ್ ಮಹಾನಿರ್ದೇಶಕರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿ ಮನವೊಲಿಸಿದ ನಂತರ ಚೈತ್ರ ಅವರು ಪದಕ ಪಡೆದುಕೊಂಡರು.

Write A Comment