ಮನೋರಂಜನೆ

ಬಿಡುವಿನ ವೇಳೆಯಲ್ಲಿ ಅಭಿಮಾನಿಗಳ ಜೊತೆ ಕಾಲ ಕಳೆಯುತ್ತಾರೆ ಬಾಹುಬಲಿ ನಟ ಪ್ರಭಾಸ್

Pinterest LinkedIn Tumblr

prabhas4

ಮುಂಬಯಿ: ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಬೇರೆಲ್ಲಾ ನಟರಿಗಿಂತ ಸ್ವಲ್ಪ ಡಿಫರೆಂಟ್, ತೀವ್ರ ನಾಚಿಕೆ ಸ್ವಭಾವದ ಪ್ರಭಾಸ್ ಮನೆಗೆ ಬರುವ ತಮ್ಮ ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ.

36 ವರ್ಷ ವಯಸ್ಸಿನ ಪ್ರಭಾಸ್ ಚಿತ್ರದಲ್ಲಿ ಅಭಿನಯಿಸುವಾಗ ಪಾತ್ರದಲ್ಲಿ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಳ್ಳುತ್ತಾರೆ. ಪ್ರಭಾಸ್ ಅಭಿಮಾನಿಗಳ ಜೊತೆ ತಮ್ಮ ಚಿತ್ರಗಳ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳುತ್ತಾರೆ.

ಇನ್ನೂ 30 ಜಿಲ್ಲೆಗಳಿಂದ ಬರುವ ಅಭಿಮಾನಿಗಳ ಜೊತೆ ಒಟ್ಟುಗೂಡಿ ಅವರು ನೀಡುವ ಸಲಹೆಗಳನ್ನು ಸ್ವೀಕರಿಸುತ್ತಾರೆ. ತಮ್ಮ ಮನೆಗೆ ಬರುವ ಅಭಿಮಾನಿಗಳನ್ನು ಆದರದಿಂದ ಕಾಣುವ ಪ್ರಭಾಸ್ ಪ್ರತಿ ಅಭಿಮಾನಿಯ ಸಲಹೆಗೆ ಮನ್ನಣೆ ನೀಡುತ್ತಾರೆ.

ತಮ್ಮ ಎಲ್ಲಾ ಅಭಿಮಾನಿಗಳನ್ನು ಒಂದೇ ರೀತಿಯಲ್ಲಿ ಪ್ರೀತಿ ಮಾಡುವ ಪ್ರಭಾಸ್ ರ ಗುಣ ಎಲ್ಲರೂ ಅವರನ್ನು ಪ್ರೀತಿಸುವಂತೆ ಮಾಡಿದೆ. ಬಾಹುಬಲಿ -2 ಚಿತ್ರ 2017 ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದ್ದು, ಸದ್ಯ ಆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Write A Comment