ಕರ್ನಾಟಕ

ಸಾಮಾಜಿಕ ಸೇವೆಯಲ್ಲೂ ಸೇನಾ ಕಾರ್ಯ ಪ್ರಶಂಸೆ

Pinterest LinkedIn Tumblr

armyಬೆಂಗಳೂರು, ಏ. ೧- ಭಾರತೀಯ ಸೇನಾ ಪಡೆಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವಿಭಾಗ ಸೇನಾ ಚಟುವಟಿಕೆಗಳಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ಕೂಡ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಕೆ.ಎಸ್. ನಿಜ್ಜಾರ್ ಅವರು ಇಂದಿಲ್ಲಿ ತಿಳಿಸಿದರು.

ಈ ಹುದ್ದೆಯನ್ನು ಅಲಂಕರಿಸಿದ ನಂತರ ಅವರು ಇದೇ ಮೊದಲ ಬಾರಿಗೆ ಸಬ್ ಏರಿಯಾದ ಚಟುವಟಿಕೆಗಳ ಬಗ್ಗೆ ವಿವರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ, ಶೈಕ್ಷಣಿಕ, ವಿಕಲಚೇತನರ ಕಲ್ಯಾಣ, ಮಾಜಿ ಸೈನಿಕರ ಕಲ್ಯಾಣ ಮತ್ತಿತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಹೇಳಿದರು.

1946 ರಲ್ಲಿ ಆರಂಭವಾದ ಈ ವಿಭಾಗ ಅಂದಿನಿಂದಲೂ ಸೇನಾ ಚಟುವಟಿಕೆಗಳ ಜತೆಗೆ ತರಬೇತಿ, ಉನ್ನತ ಶಿಕ್ಷಣ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದೆ ಎಂದರು.

ಭಾರತೀಯ ಸೇನೆ ಪ್ರಾರಂಭಗೊಂಡ ದಿನಗಳಿಂದ ಅದು ನಡೆದುಬಂದ ಹಾದಿಯನ್ನು ಮತ್ತು ನಂತರದ ಬೆಳವಣಿಗೆಗಳನ್ನು, ವಿವಿಧ ಯುದ್ಧಗಳಲ್ಲಿ ಭಾಗವಹಿಸಿದ್ದ ಪಾತ್ರವನ್ನು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ವಿಕಲಚೇತನರಿಗಾಗಿ ಆಶಾ ಎಂಬ ಶಾಲೆಯನ್ನು ನಡೆಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಭಾಗದ ಹಿರಿಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

Write A Comment