ರಾಷ್ಟ್ರೀಯ

ಅಜರ್ ಮೇಲೆ ನಿಷೇಧಕ್ಕೆ ಮತ್ತೆ ಚೀನ ಅಡ್ಡಗಾಲು

Pinterest LinkedIn Tumblr

MasoodAzharclrನವದೆಹಲಿ, ಏ. ೧ – ನಾಟಕೀಯ ಬೆಳವಣಿಗೆಯೊಂದರಲ್ಲಿ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕರ ಆಕ್ರಮಣದ ರೂವಾರಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆಯಲ್ಲಿ ನಿಷೇಧ ಹೇರುವ ಭಾರತದ ಯತ್ನಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆ ಜೈಷ್ – ಎ – ಮೊಹಮ್ಮದ್ ಮೇಲೆ ನಿಷೇಧ ಹೇರಲು ವಿಶ್ವಸಂಸ್ಥೆ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ನಿನ್ನೆ ಈ ವಿಷಯದಲ್ಲಿ ಈಗಲೇ ನಿರ್ಧರಿಸದಂತೆ ಚೀನಾ ವಿಶ್ವಸಂಸ್ಥೆಗೆ ಮನವಿ ಮಾಡಿದೆ.

ಜ. 2 ರಂದು ಪಠಾಣ್‌ಕೋಟ್‌ನಲ್ಲಿ ದಾಳಿ ನಡೆಯುತ್ತಿದ್ದಂತೆಯೇ ಭಾರತ ವಿಶ್ವಸಂಸ್ಥೆಯನ್ನು ಸಂಪರ್ಕಿಸಿ ಅಜರ್ ಮೇಲೆ ನಿಷೇಧ ಹೇರುವಂತೆ ಅಲ್ – ಖೈದಾ ದಿಗ್ಬಂಧನ ಸಮಿತಿಯನ್ನು ಕೋರಿತ್ತು.

ಇವನ ವಿರುದ್ಧ ದಿದ್ಬಂಧನ ಹೇರದೇ ಹೋದರೆ ದಕ್ಷಿಣ ಏಷ್ಯಾದ ಇತರ ದೇಶಗಳು ಭಯೋತ್ಪಾದಕರ ಬೆದರಿಕೆಗಳಿಗೆ ಈಡಾಗಬೇಕಾಗುತ್ತದೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿತ್ತು.

Write A Comment