ಕರ್ನಾಟಕ

3ನೇ ಬಾರಿ ಪರೀಕ್ಷೆಗೆ ಜೆಡಿಎಸ್, ಬಿಜೆಪಿ ತೀವ್ರ ವಿರೋಧ: ದ್ವಿತೀಯ ಪಿಯುಸಿ ರಸಾಯನಿಕ ಮರು ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ

Pinterest LinkedIn Tumblr

Kumar-swamyಬೆಂಗಳೂರು: ದ್ವಿತೀಯ ಪಿ ಯು ರಸಾಯನ ವಿಜ್ಞಾನ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಹಾಗೂ ಜೆಡಿಎಸ್‌, 3ನೇ ಬಾರಿಗೆ ನಡೆಸದಂತೆ ಒತ್ತಾಯಿಸಿವೆ.
ನಗರದ ಮಲ್ಲೇಶ್ವರದಲ್ಲಿರುವ ಪಿ ಯು ಮಂಡಳಿ ಎದುರು ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿರೋಧ ಪಕ್ಷಗಳು ಸರ್ಕಾರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದವು.
3ನೇ ಬಾರಿ ಪರೀಕ್ಷೆ ತೀವ್ರ ವಿರೋಧ: ಪತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ಪ್ರಶ್ನೆ ಪತ್ರಿಕೆ ಸೋರಿಕೆ ಆಡಳಿತ ವೈಫಲ್ಯ. ಮಕ್ಕಳೊಂದಿಗೆ ಚೆಲ್ಲಾಟ ಆಡಬೇಡಿ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ. ಮರು ಪರೀಕ್ಷೆ ಬರೆಯಿರಿ ಎಂದು ಹೇಳಬೇಡಿ. ಈಗಾಗಲೇ ನಡೆಸಿರುವ ಪರೀಕ್ಷೆ ಪತ್ರಿಕೆಗಳನ್ನೆ ಮೌಲ್ಯಮಾಪನ ನಡೆಸಿ’ ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಆರ್.ಅಶೋಕ್ ಮಾತನಾಡಿ, ಮೂರನೇ ಬಾರಿ ಪರೀಕ್ಷೆ ನಡೆಸದೆ ಈಗಾಗಲೇ ನಡೆಸಲಾಗಿರುವ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನೇ ಮೌಲ್ಯಮಾಪನ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಕುಮಾರಸ್ವಾಮಿ, ಆರ್ ಅಶೋಕ್ ಅವರಲ್ಲದೇ ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್, ಡಾ.ಸಿಎನ್ ಅಶ್ವತ್ಥ ನಾರಾಯಣ, ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರಾದ ಅಶ್ವತ್ತ ನಾರಾಯಣ. ಗಣೇಶ್ ಕಾರ್ಣಿಕ್, ಎಸ್.ವಿ. ಸಂಕನೂರ, ಅರುಣ ಶಹಪುರ, ಅಮರನಾಥ ಪಾಟೀಲ ಉಪಸ್ಥಿತರಿದ್ದರು.

Write A Comment