ಕರ್ನಾಟಕ

ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ: ಪಿಯು ಪರೀಕ್ಷಾ ವಿಭಾಗದ 40 ಅಧಿಕಾರಿಗಳ ಅಮಾನತು

Pinterest LinkedIn Tumblr

karnataka-2nd-puc

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಯುಸಿ ಪರೀಕ್ಷಾ ವಿಭಾಗದ 40 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಜಂಟಿ ನಿರ್ದೇಶಕ ಕೆ.ಎನ್. ರಂಗನಾಥ್, ಅಧೀಕ್ಷಕರ ಆಪ್ತ ಸಹಾಯಕಿ ಜಯಲಕ್ಷ್ಮಿ, ಉಪ ನಿರ್ದೇಶಕ ರವೀಂದ್ರ ಆರ್ ಕೊನ್ನೂರು, ಸಹಾಯಕ ನಿರ್ದೇಶಕ ಜಂಬಣ್ಣ ಎಸ್, ಸಹಾಯಕ ನಿರ್ದೇಶಕ ಸುರೇಶ್, ಸಹಾಯಕ ನಿರ್ದೇಶಕಿ ಗೀತಾದೇವಿ ಎಸ್, ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ.ಆರ್ ಅಧೀಕ್ಷಕ ವಿಶ್ವೇಶ್ವರ ಎಸ್.ಬಿ., ಅಧೀಕ್ಷಕಿ ಹೇಮಲತಾ ವೈ.ಎಂ, ಪ್ರಥಮ ದರ್ಜೆ ಸಹಾಯಕಿ ಅನುಪಮಾ ಎಂ, ದ್ವಿತೀಯ ದರ್ಜೆ ಸಹಾಯಕರಾದ ಸಣ್ಣಸ್ವಾಮಿ ಎಂ.ಆರ್, ಗುರುರಾಜ್ ಎಸ್. ವಸಂತಕುಮಾರ್ ನಾಯಕ್ , ರಮೇಶ್ ಎನ್ ಹಾಗೂ ಗ್ರೂಪ್ ಡಿ ನೌಕರರಾದ ಅಂಬಿಕಾ ಕೆ.ಬಿ, ಭಾನುಮೂರ್ತಿ ಕೆ.ಎಚ್ ಸೇರಿದಂತೆ 40 ಅಧಿಕಾರಿಗಳನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ. ಇತ್ತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪಿಯು ಬೋರ್ಡ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

Write A Comment