ಬೆಂಗಳೂರು: ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ನಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಅನ್ಫಾಲೋ ಮಾಡಿರುವುದು ಈಗ ಸುದ್ದಿಯಾಗಿದೆ.
ನಿನ್ನೆ ತಾನೆ ನಟ ದರ್ಶನ್ ಮೋದಿಗೆ ಉತ್ತರ ಕರ್ನಾಟಕದ ಸಮಸ್ಯೆ ಬಗೆಗೆ ಗಮನ ಹರಿಸಿ ಅಂತ ಟ್ವೀಟ್ ಮಾಡಿದ್ದರು. ಈಗ ದರ್ಶನ್ ಕಿಚ್ಚ ಸುದೀಪ್ ಅವರನ್ನು ಟ್ವಿಟ್ಟರ್ನಲ್ಲಿ ಅನ್ಫಾಲೋ ಮಾಡಿದ್ದು, ಇಬ್ಬರ ನಡುವೆ ಬಿರುಕು ಮೂಡಿದ್ಯಾ ಎನ್ನುವ ಅನುಮಾನ ಮೂಡಿದೆ.
ಸುದೀಪ್ ಹಾಗೂ ದರ್ಶನ್ ನಿರಂತರವಾಗಿ ಟ್ವಿಟರ್ ಹಾಗೂ ಫೇಸ್ಬುಕ್ನ ತಮ್ಮ ಖಾತೆಯ ಮುಖಾಂತರ ಅಭಿಮಾನಿಗಳ ಸಂಪರ್ಕದಲ್ಲಿದ್ರು. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ದರ್ಶನ್ ಹಾಗೂ ಸುದೀಪ್ ಒಬ್ಬರನೊಬ್ಬರು ಫಾಲೋ ಕೂಡ ಮಾಡ್ತಾ ಇದ್ರು, ಆದ್ರೆ ಇದ್ದಕಿದ್ದಂತೆ ಈಗ ದರ್ಶನ್ ಸುದೀಪ್ರನ್ನು ಅನ್ಫಾಲೋ ಮಾಡಿದ್ದಾರೆ.
ಈ ವಿಷಯ ನಾನಾ ಉಹಾಪೋಹಗಳಿಗೆ ಕಾರಣವಾಗಬಹುದು. ಆದೇನೇ ಇದ್ರೂ ಈಗ ಆನ್ಪಾಲೋ ಮಾಡಿರುವುದು ಬೈ ಮೇಸ್ಟೇಕೋ ಅಥವಾ ಉದ್ದೇಶಪೂರ್ವಕವಾಗಿಯೋ ಎನ್ನುವುದನ್ನು ಸ್ವತಃ ದರ್ಶನ್ ಅವರೇ ಹೇಳ್ಬೇಕು.