ಕನ್ನಡ ವಾರ್ತೆಗಳು

ಪುತ್ತೂರು ಜಾತ್ರೆ ಆಮಂತ್ರಣ ಪತ್ರಿಕೆ ವಿವಾದ : ಜಿಲ್ಲಾಧಿಕಾರಿಗೆ ನಿರ್ಭಂಧ ವಿಧಿಸಿದ ಹೈಕೋರ್ಟ್‌ – ಆಮಂತ್ರಣ ಪತ್ರಿಕೆ ಮರು ಮುದ್ರಣಕೆ ಆದೇಶ

Pinterest LinkedIn Tumblr

Putturu_Invitation_Prob_11

ಮಂಗಳೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಆಮಂತ್ರಣ ಪತ್ರಿಕೆ ಗೊಂದಲ ಸಂಬಂಧ ಹಿಂದೂ ಮುಖಂಡರು ನೀಡಿದ ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಎ.ಬಿ. ಇಬ್ರಾಹಿಂ ಅವರ ಹೆಸರು ತೆಗೆದು ಅಮಂತ್ರಣ ಪತ್ರಿಕೆಗಳನ್ನು ಮರು ಮುದ್ರಿಸಲು ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ಆದೇಶ ನೀಡಿದೆ.

ಆಮಂತ್ರಣ ಪತ್ರಿಕೆಯಲ್ಲಿ ಅನ್ಯ ಮತೀಯ ದ.ಕ. ಜಿಲ್ಲಾಧಿಕಾರಿ ಹೆಸರು ಮುದ್ರಿಸಿರುವುದನ್ನು ಪ್ರಶ್ನಿಸಿ, ಪುತ್ತೂರು ನಗರ ವಿಹಿಂಪ ಅಧ್ಯಕ್ಷ ನವೀನ್‌ ಕುಲಾಲ್‌ ಅವರು ರಿಟ್‌ ಅರ್ಜಿ ಸಲ್ಲಿಸಿದ್ದರು. ನವೀನ್ ಕುಲಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವದ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರನ್ನು ತೆಗೆದು ಹಾಕಿ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಣಗೊಳಿಸುವಂತೆ ಸರಕಾರಕ್ಕೆ ಸೂಚಿಸಿದೆ

ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್‌ನ ವಿಭಾಗೀಯ ಪೀಠ ಉತ್ಸವದಲ್ಲಿ ಭಾಗಿಯಾಗಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನಿರ್ಬಂಧ ವಿಧಿಸಿದೆ.ಅಲ್ಲದೇ ಆಮಂತ್ರಣ ಪತ್ರಿಕೆಯಲ್ಲಿರುವ ಇಬ್ರಾಹಿಂ ಅವರ ಹೆಸರು ತೆಗೆದು ಪತ್ರಿಕೆಗಳನ್ನು ಮರು ಮುದ್ರಿಸಲು ಆದೇಶ ನೀಡಿದೆ. ದೇವಾಲಯದ ಯಾವುದೇ ಚಟುವಟಿಗೆಗಳಲ್ಲಿ ಡಿಸಿ ಇಬ್ರಾಹಿಂ ಅವರು ಭಾಗಿಯಾಗಕೂಡದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ವಿಶ್ವಹಿಂದೂ ಪರಿಷತ್‌, ಬಜರಂಗದಳ ಸಂಘಟನೆಗಳು ತೀವ್ರವಾಗಿ ಖಂಡಿಸಿ ಆಮಂತ್ರಣ ಪತ್ರಿಕೆಯಿಂದ ಇಬ್ರಾಹಿಂ ಹೆಸರು ತೆಗೆದು ಪುನರ್‌ ಮುದ್ರಣ ಮಾಡಬೇಕೆಂದು ಆಗ್ರಹಿದ್ದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಬಗ್ಗೆ ತಮಗೆ ವೈಯಕ್ತಿಕ ವಿರೋಧ ಇಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಅಧಿನಿಯಮ 1997ರ 7 (1)ರ ವಿಧಿ ಎ.ಬಿ. ಇಬ್ರಾಹಿಂ ಆಮಂತ್ರಣ ನೀಡುವುದು, ಆಡಳಿತ ನಡೆಸುವುದನ್ನು ನಿಷೇಧಿಸುತ್ತದೆ. ಅವರು ಕಾನೂನು ಉಲ್ಲಂಘಿಸಿದ್ದಾರೆ. ಶಿಷ್ಟಾಚಾರ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯಿಸುತ್ತದೆ. ದುರುದ್ದೇಶ ಪೂರ್ವಕವಾಗಿ ಹಿಂದೂಗಳ ಧಾರ್ಮಿಕ ನಂಬಿಕೆ, ಆಮಂತ್ರಣ ಪತ್ರಿಕೆಯ ಪಾವಿತ್ರ್ಯ ಕೆಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.

Write A Comment