ಅಂತರಾಷ್ಟ್ರೀಯ

ವಿಶ್ವದ ಅತಿ ಹಳೆಯ ಆಮೆಗೆ 184 ವರ್ಷಗಳ ನಂತರ ಸ್ನಾನ!

Pinterest LinkedIn Tumblr

tortoise-

ಜೇಮ್ಸ್ ಟೌನ್: ಸೇಂಟ್ ಹೆಲೆನಾ ದ್ವೀಪದಲ್ಲಿರುವ ವಿಶ್ವದ ಅತಿ ಹಳೆಯ ಆಮೆಗೆ 184 ವರ್ಷಗಳ ಬಳಿಕ ಸ್ನಾನ ಮಾಡಿಸಿರುವುದು ಈಗ ಸುದ್ದಿಯಾಗಿದೆ.

ಭೂಮಿಯ ಮೇಲೆ ಬದುಕುವ ಪ್ರಾಣಿಗಳಲ್ಲಿ ಅತ್ಯಂತ ಪುರಾತನ ಜೀವಿ ಎನಿಸಿಕೊಂಡಿರುವ ಜೋನಾಥನ್ ಎಂಬ ಹೆಸರಿನ ಆಮೆಗೆ 184 ವರ್ಷಗಳ ಬಳಿಕ ಸ್ನಾನ ಮಾಡಿಸಿಲಾಗಿದೆ. ದೈತ್ಯ ಆಮೆಗೆ ಸ್ನಾನ ಮಾಡಿಸುತ್ತಿರುವ ವಿಡಿಯೋವನ್ನ ಇಲ್ಲಿನ ಸರ್ಕಾರ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಉಲ್ಲೇಖಿಸಿದೆ.

ಈ ಆಮೆಗೆ ಇದರ 184 ವರ್ಷಗಳ ಜೀವಿತಾವಧಿಯಲ್ಲಿ ಇದೇ ಮೊದಲನೇ ಸ್ನಾನವಾಗಿದೆ. ಇಷ್ಟು ದಿನ ಆಮೆಯ ಮೈ ಮೇಲೆ ಅಂಟಿಕೊಂಡಿದ್ದ ಪಾಚಿ ಮತ್ತು ಮಣ್ಣನ್ನು ಉಜ್ಜಿ ತೆಗೆಯಲಾಗಿದ್ದು ಇದೀಗ ತನ್ನ ನೈಜ ರೂಪದಲ್ಲಿ ಜೋನಾಥಾನ್ ಪ್ರವಾಸಿಗರನ್ನ ಸೆಳೆಯುತ್ತಿದೆ ಅಂತಾರೆ ಆಮೆಗೆ ಸ್ನಾನ ಮಾಡಿಸಿದ ಪಶುವೈದ್ಯ ಜೋ ಹಾಲಿನ್ಸ್.

Write A Comment