ಅಂತರಾಷ್ಟ್ರೀಯ

ಹೇರ್ ಡ್ರೈಯರ್‍ನಿಂದ ಬದುಕಿತು ಕುರಿ ಮರಿಯ ಜೀವ!

Pinterest LinkedIn Tumblr

HAIRDRYER

ಲಂಡನ್: ಪ್ರಾಣಿಗಳು ಸಾಯುವ ಹಂತ ತಲುಪಿದ್ದರೆ, ಅವುಗಳನ್ನು ಪಶು ವೈದ್ಯರ ಚಿಕಿತ್ಸೆಯಿಂದ ಗುಣಪಡಿಸಿ ಜೀವರಕ್ಷಣೆ ಮಾಡಿರುವುದುಂಟು. ಆದ್ರೆ ಇಂಗ್ಲೆಂಡ್‍ನಲ್ಲಿ ಹೇರ್ ಡ್ರೈಯರ್ ಬಳಸಿ ಕುರಿ ಮರಿಯ ರಕ್ಷಣೆ ಮಾಡಲಾಗಿದೆ.

ಇಂಗ್ಲೆಂಡ್‍ನ ಡೆಸ್‍ಬೊರಗ್ ಎಂಬ ಪ್ರದೇಶದಲ್ಲಿ ಹೇರ್ ಡ್ರೈಯರ್‍ನಿಂದ ಕುರಿ ಮರಿಯೊಂದು ತನ್ನ ಜೀವ ಉಳಿಸಿಕೊಂಡಿದೆ. ರೈತರೊಬ್ಬರ ಮನೆಯಲ್ಲಿ ಸಾಕಲಾಗಿದ್ದ ಈ ಕುರಿ ಮರಿ ತಾಯಿ ಕುರಿ ಕುಡಿಯಲೆಂದು ಇಟ್ಟಿದ್ದ ತಣ್ಣನೆಯ ನೀರಿನ ಬಕೆಟ್‍ಗೆ ಬಿದ್ದಿದೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾಯುತ್ತಿದ್ದ ಕುರಿ ಮರಿಯನ್ನು ಕಂಡ ರೈತ ಬೆಚ್ಚಗೆ ಮಾಡಲು ಹೇರ್ ಡ್ರೈಯರ್ ಬಳಸಿದ್ದಾನೆ.

ಸಾಯುವ ಹಂತಕ್ಕೆ ತಲುಪಿದ್ದ ಕುರಿ ಮರಿ ಚಳಿಯಿಂದ ನಡುಗುತ್ತಿದ್ದ ಕಾರಣ ರೈತ ಅದರ ದೇಹವನ್ನು ಬಿಸಿಯಾಗಿಸಲು ತನ್ನದೇ ಹೇರ್ ಡ್ರೈಯರ್ ಬಳಸಿದ್ದಾನೆ. ಗಂಟೆಗೂ ಅಧಿಕ ಸಮಯ ಹೇರ್ ಡ್ರೈಯರ್ ಮೂಲಕ ಕುರಿ ಮರಿಗೆ ಬಿಸಿಗಾಳಿ ನೀಡಿದ ಮೇಲೆ ಅದು ಚೇತರಿಸಿಕೊಂಡಿದೆ.

Write A Comment