ಕರ್ನಾಟಕ

ಮೃತ ರೈತನ ಮಕ್ಕಳಿಗೆ ನೆರವು; ಕೊಟ್ಟ ಮಾತು ಮರೆತ ಮಾಜಿ ಸಂಸದೆ ರಮ್ಯಾ

Pinterest LinkedIn Tumblr

Ramya

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಂಡ್ಯದ ರೈತನ ರೈತನ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ರಮ್ಯಾ ಮಾತು ನೀಡಿ ಈಗ ಮರೆತಿದ್ದಾರೆ.

ಅಕ್ಟೋಬರ್ 2015 ರಲ್ಲಿ ಮಂಡ್ಯದ ಸಣಬದಕೊಪ್ಪಲಿನ ರೈತ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ರಾಜ್ಯ ಪ್ರವಾಸಕ್ಕಾಗಮಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮೃತ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು, ಜೊತೆಗೆ ಕರ್ನಾಟಕ ಸರ್ಕಾರ ನೀಡಲು ಬಯಸಿದ್ದ 5 ಲಕ್ಷ ಪರಿಹಾರ ಹಣವನ್ನು ಕೂಡಲೇ ನೀಡುವಂತೆ ಸಿದ್ದರಾಮಯ್ಯಗೆ ಆಗ್ರಹಿಸಿದ್ದರು.

ಅಕ್ಟೋಬರ್ 9 ರಂದು ರಾಹುಲ್ ಭೇಟಿಯ ವೇಳೆ ಹಾಜರಿದ್ದ ರಮ್ಯಾ ಮೃತ ರೈತನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಮೃತ ರೈತನ ಮಕ್ಕಳಾದ ಸ್ಮಿತಾ ಮತ್ತು ಸಾಗರ್ 5 ಮತ್ತು 6ನೇ ತರಗತಿಯಲ್ಲಿ ಓದುತ್ತಿದ್ದು, ಇದುವರೆಗೆ ರಮ್ಯಾ ಅವರಿಂದ ಒಂದು ನಯಾಪೈಸೆ ಸಹಾಯ ಸಿಕ್ಕಿಲ್ಲ ಎಂದು ಮೃತ ರೈತ ಲೋಕೇಶ್ ಪತ್ನಿ ಶೋಭಾ ದೂರಿದ್ದಾರೆ.

ರಾಹುಲ್ ಗಾಂಧಿ ಯಿಂದ ಹೊಗಳಿಸಿಕೊಳ್ಳಲು ರಮ್ಯಾ ಗಿಮಿಕ್ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಆಪಾದಿಸಿದ್ದಾರೆ.

Write A Comment