ಕನ್ನಡ ವಾರ್ತೆಗಳು

ಲವರ್ ನಂಬರ್ ಕೇಳಿ ಕೋಲಿನ ಪೆಟ್ಟು ತಿಂದ ಯುವತಿ!

Pinterest LinkedIn Tumblr

mP5RHbc

ಉಡುಪಿ: ಪ್ರಿಯತಮನ ಮೊಬೈಲ್ ನಂಬರ್ ಕೇಳಲು ಅವರ ಮನೆಗೆ ಹೋದ ಯುವತಿಗೆ ಯುವಕನ ಸಂಬಂಧಿ ಕೋಲಿನಿಂದ ಪೆಟ್ಟು ಹೊಡೆದು ಕಳಿಸಿದ ಬಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇಂದ್ರಾಳಿ ದುರ್ಗಾನಗರದ ನಿವಾಸಿ ಪಾರ್ವತಿ (18) ದೂರು ನೀಡಿದ ಯುವತಿ.

‘ತಾನು ಸುಮಾರು ೪ ವರ್ಷದ ಹಿಂದೆ ಕ್ಲಿಂಟನ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದೆ. ಈಗ ಆತ ಮುಂಬಯಿ ಕಡೆ ಇದ್ದಾನೆ ಎಂದು ತಿಳಿಯಿತು ಆತನ ಫೋನ್ ನಂಬರ್ ತಿಳಿಯುವ ಸಲುವಾಗಿ ಸೋಮವಾರ ಮಧ್ಯಾಹ್ನ ತಾನು ಕ್ಲಿಂಟನ್ ಪೋಷಕರ ಮನೆಯಾದ ಶಿವಳ್ಳಿ ಗ್ರಾಮದ ಗುಂಡಿಬೈಲಿಗೆ ಹೋಗಿದ್ದೆ. ಅಲ್ಲಿ ಅವರ ತಾಯಿ ಸಿಲಿಯಾನ್ ಅವರಲ್ಲಿ ನಂಬರ್ ಕೇಳಿದ್ದೆ. ಆಗ ಬಂದ ಕ್ಲಿಂಟನ್‌ನ ಆಂಟಿ ನಿನಗೇಕೆ ಫೋನ್ ನಂಬರ್ ಎಂದು ಅವ್ಯಚವಾಗಿ ಬೈದಿದ್ದಲ್ಲದೇ ಕೊರಳಿಗೆ ಕೈ ಹಾಕಿ ಕಾಂಪೌಂಡ್‌ನಿಂದ ಹೊರಗೆ ದೂಡಿ ಕೋಲಿನಿಂದ ಹೊಡೆದಿದ್ದಾರೆ’ ಎಂದು ಪಾರ್ವತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

(ಸಾಂದರ್ಭಿಕ ಚಿತ್ರ)

Write A Comment