ಕರ್ನಾಟಕ

ಡಕಾಯಿತಿಗೆ ಹೊಂಚು: ಐವರ ಬಂಧನ

Pinterest LinkedIn Tumblr

crime

ತುಮಕೂರು: ಡಕಾಯಿತಿಗೆ ಹೊಂಚು ಹಾಕುತ್ತಿದ್ದ 5 ಮಂದಿಯನ್ನು ತಾಲ್ಲೂಕಿನ ಕೋರಾ ಪೊಲೀಸರು ತೋವಿನಕೆರೆ ಕ್ರಾಸ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

ಓಬಳಾಪುರದ ಮಂಜುನಾಥ್, ಅವಳಿಪಾಳ್ಯದ ವೆಂಕಟೇಶ್, ಅಂತರಸನಹಳ್ಳಿಯ ಜಯಚಂದ್ರ, ನರಸೀಪುರದ ಗಿರೀಶ್ ಹಾಗೂ ಯಲ್ಲಾಪುರದ ಮಂಜುನಾಥ್ ಎಂಬುವರೇ ಬಂಧಿತ ಆರೋಪಿಗಳು.

ತೋವಿನಕೆರೆ ಕ್ರಾಸ್‌ನಲ್ಲಿ ಪೊಲೀಸರು ರಾತ್ರಿ ಗಸ್ತಿನಲ್ಲಿದ್ದಾಗ ಈ ಐವರು ಡಕಾಯಿತರು ಟಾಟಾ ಸುಮೋ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿರುವ ಪೊಲೀಸರು ಈ ಐವರನ್ನು ಬೆನ್ನಟ್ಟಿ ಹಿಡಿದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲು ತಂದಿದ್ದ ಮಾರಕಾಸ್ತ್ರಗಳು ಮತ್ತು ಒಂದು ಟಾಟಾ ಸುಮೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಈ ಐವರನ್ನು ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ, ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ವಿಜಯಕುಮಾರ್ ಹಾಗೂ ಸಿಪಿಐ ರವಿ ನೇತೃತ್ವದಲ್ಲಿ ಕೋರಾ ಪಿಎಸ್ಐ ರವಿಕುಮಾರ್ ಮತ್ತು ಸಿಬ್ಬಂದಿ ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಾ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Write A Comment