ಕರ್ನಾಟಕ

ಮೌಢ್ಯ ನಿಷೇಧ ಕಾನೂನು ಜಾರಿಗೆ ಸರಕಾರ ಉದ್ದೇಶ

Pinterest LinkedIn Tumblr

sidduಬೆಂಗಳೂರು, ಮಾ. ೨೧- ಮೌಢ್ಯ ನಿಷೇಧ ಕುರಿತು ಕಾನೂನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು ಪುನರುಚ್ಚರಿಸಿದರು.
ಭ್ರಷ್ಟಾಚಾರ ನಿಗ್ರಹ ದಳ ರಚನೆ ಕುರಿತು ನಿಯಮ ೬೯ರಡಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮೌಢ್ಯ ನಿಷೇಧ ಕಾನೂನು ತರುವ ವಿಚಾರದಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಸಮಾಜದಲ್ಲಿನ ಮೌಢ್ಯಗಳನ್ನ ದೂರ ಮಾಡುವುದು ಇದರ ಉದ್ದೇಶ ಎಂದು ಹೇಳಿದರು.
ಬಸವಣ್ಣನವರು ೮೦೦ ವರ್ಷಗಳ ಹಿಂದೆ ಪ್ರತಿಪಾದಿಸಿದ ಆಚಾರ-ವಿಚಾರಗಳು ಇನ್ನೂ ಜಾರಿಗೆ ಬಂದಿಲ್ಲ. ಜಾತೀಯತೆ ಹೋಗಬೇಕು. ಸಮಾನತೆ ಬರಬೇಕು ಎಂಬ ವಿಚಾರಗಳು ಸಾಕಾರಗೊಂಡಿಲ್ಲ. ಮೌಢ್ಯಗಳ ವಿರುದ್ಧ ಬಸವಣ್ಣನವರು ಧ್ವನಿಯೆತ್ತಿದ್ದರು ಎಂದ ಅವರು, ಮೌಢ್ಯಗಳನ್ನು ನಿಷೇಧಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾನೂನು ತರುವ ಮೂಲಕವಾದರೂ ಇಂಥ ಅನಿಷ್ಠ ಪದ್ದತಿಗಳನ್ನು ದೂರ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಮೊದಲು ಜಾಗೃತಿ ಮೂಡಿಸಿ
ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮೌಢ್ಯ ನಿಷೇಧ ಜಾರಿ ಎಂಬುದು ಅಷ್ಟು ಸುಲಭವಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆ ನಂತರ ಕಾನೂನು ಮಾಡುವುದು ಒಳ್ಳೆಯದು ಎಂದು ಸಲಹೆ ಮಾಡಿದರು.
ಸಭಾಧ್ಯಕ್ಷರ ಸಲಹೆಗೆ ಸಹಮತ ವ್ಯಕ್ತಪಡಿಸಿದ ಸಿದ್ದರಾಮಯ್ಯ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೆ ಕಾನೂನು ತರುವ ಚಿಂತನೆ ಇದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ನಾನು ಕೂಡ ಬಸವಣ್ಣನವರ ತತ್ವಗಳನ್ನು ನಂಬಿದವನು. ಮೌಢ್ಯಗಳನ್ನು ದೂರ ಮಾಡಬೇಕೆಂಬ ವಿಚಾರದಲ್ಲಿ ತಮ್ಮ ಸಹಮತವಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿ ಮೂಢ ನಂಬಿಕೆಗಳ ವಿರುದ್ಧ ನಡೆದುಕೊಂಡಿದ್ದೆ. ಸರ್ಕಾರ ಮೌಢ ನಿಷೇಧ ಕಾನೂನು ತರುವುದಾದರೆ ತಮ್ಮ ಬೆಂಬಲವಿದೆ ಎಂದರು.

Write A Comment