ರಾಷ್ಟ್ರೀಯ

‘ಬಿಜೆಪಿಯ ರಾಷ್ಟ್ರೀಯತೆ ಪಾಠದ ಅಗತ್ಯವಿಲ್ಲ’: ಸೀತಾರಾಮ್ ಯೆಚೂರಿ

Pinterest LinkedIn Tumblr

sitaದೆಹಲಿ: ಬಿಜೆಪಿಯವರಿಂದ ರಾಷ್ಟ್ರೀಯತೆ ಪಾಠ ಕೇಳುವುದಿಲ್ಲ ಎಂದು ಸಿಪಿಐ(ಎಮ್) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ರಾಷ್ಟ್ರೀಯತೆ ಬಗ್ಗೆ ಬಿಜೆಪಿ ವಾದ, ಬುಷ್ ಅವರ ಕುಖ್ಯಾತ ಪ್ರತಿಪಾದನೆಯನ್ನು ಗಮನಿಸಿದಾಗ ನೀವು ನಮ್ಮೊಂದಿಗಿದ್ದಿರೋ ಅಥವಾ ಭಯೋತ್ಪಾದಕರೊಂದಿಗೋ ಎಂಬ ಪ್ರಶ್ನೆ ಕಾಡುತ್ತದೆ. ಬಿಜೆಪಿಯನ್ನು ಬೆಂಬಲಿಸುವವರು ರಾಷ್ಟ್ರೀಯವಾದಿಗಳು. ವಿರೋಧಿಸುವವರು ರಾಷ್ಟ್ರದ್ರೋಹಿಗಳು. ಏನೇ ಇರಲಿ ನಾವು ಬಿಜೆಪಿಯಿಂದ ರಾಷ್ಟ್ರೀಯತೆ ಪಾಠ ಕಲಿಯಬಯಸುವುದಿಲ್ಲ ಎಂದು ಯೆಚೂರಿ ಹೇಳಿದ್ದಾರೆ.

ರಾಷ್ಟ್ರೀಯತೆಯ ಸಿದ್ಧಾಂತ ನಮ್ಮ ನಂಬಿಕೆಗಳು ಮತ್ತು ತತ್ವಶಾಸ್ತ್ರಕ್ಕೆ ಮಾರ್ಗದರ್ಶನ ನೀಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಮತ್ತು ರಾಷ್ಟ್ರೀಯತವಾದ ನಿಶ್ಚಿತವಾಗಿಯೂ ಅಸ್ತಿತ್ವದಲ್ಲಿರುತ್ತವೆ. ವಿರೋಧ ಮತ್ತು ಅಸಮ್ಮತಿ ವ್ಯಕ್ತ ಪಡಿಸಲು ಸಂವಿಧಾನ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ದೇಶವನ್ನು ನಾಶಕ್ಕೆ ಕೊಂಡೊಯ್ಯುವಂತಹ ಸ್ವಾತಂತ್ರ್ಯವನ್ನಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದ್ದರು.

Write A Comment