ಕರ್ನಾಟಕ

ರೋಗ ಬರದಂತೆ ಮುನ್ಸೂಚನೆ ವಹಿಸಲು ಸಚಿವರ ಸೂಚನೆ

Pinterest LinkedIn Tumblr

Dinesh-Gundu-Raoclrಬೆಂಗಳೂರು, ಮಾ. ೨೦- ಜೀವನಶೈಲಿಯಿಂದ ಬರುವ ರೋಗಗಳನ್ನು ಮುಂಜಾಗರೂಕತೆ ವಹಿಸಿದರೆ ತಡೆಯಲು ಸಾಧ್ಯ ಎಂದಿರುವ ರಾಜ್ಯದ ಆಹಾರ ಸಚಿವ ದಿನೇಶ್ ಗುಂಡೂರಾವ್ ಖಾಸಗಿ ಆಸ್ಪತ್ರೆಗಳು ರೋಗ ತಡೆಯುವ ಕ್ರಮಗಳತ್ತ ಗಮನ ನೀಡುವ ಅಗತ್ಯವಿದೆ ಎಂದರು.

ರೋಗ ಬಂದ ನಂತರ ಚಿಕಿತ್ಸೆಗಿಂತ ರೋಗ ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ ಮುನ್ನೆಚ್ಚರಿಕೆ ವಹಿಸಿದರೆ ಜೀವನ ಶೈಲಿ ಬದಲಾವಣೆಯಿಂದ ಬರುವ ಹೃದಯರೋಗ, ಮಧುಮೇಹ, ರಕ್ತದೊತ್ತಡದಂತಹ ಹಲವು ರೋಗಗಳನ್ನು ನಿಯಂತ್ರಿಸಬಹುದು ಎಂದರು.

ನಗರದ ಶೇಷಾದ್ರಿಪುರದಲ್ಲಿಂದು ನೂತನ ಅಪೊಲೋ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೋಗ ಚಿಕಿತ್ಸೆ ಹಾಗೂ ಆರೈಕೆ ಇಂದಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದಿದೆ ಎಂದರು.

ಆಸ್ಪತ್ರೆಗಳನ್ನು ಆರಂಭಿಸುವುದು ಇಂದಿನ ದಿನಮಾನಗಳಲ್ಲಿ ಸುಲಭದ ಮಾತಲ್ಲ.

ಉತ್ತಮ ವೈದ್ಯರ ತಂಡದ ಜೊತೆಗೆ ಹೆಚ್ಚಿನ ಬಂಡವಾಳವು ಬೇಕು. ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವ ಅಗತ್ಯ. ಉತ್ತಮ ವೈದ್ಯರ ತಂಡ, ಜೊತೆಗೆ ಹೆಚ್ಚಿನ ಬಂಡವಾಳವು ಬೇಕು, ಇವೆಲ್ಲಕ್ಕಿಂತ ಹೆಚ್ಚಾಗಿ ಸೇವಾ ಮನೋಭಾವನೆಯು ಇರಬೇಕು ಇದೆಲ್ಲವನ್ನು ಸರಿದೂಗಿಸುವುದು ಸುಲಭವಲ್ಲ ಎಂದರು.

ಶೇಷಾದ್ರಿಪುರಂನಲ್ಲಿ ಆರಂಭವಾಗಿರುವ ಅಪೋಲೊ ಆಸ್ಪತ್ರೆ ಸ್ಥಳೀಯ ಜನರ ಜೀವನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸುವಂತೆ ಸಲಹೆ ಮಾಡಿದ ಅವರು, ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಸರ್ಕಾರ ಅಗತ್ಯ ಬೆಂಬಲ ಸಹಕಾರ ನೀಡುತ್ತದೆ ಎಂದರು.

ಅತ್ಯುತ್ತಮ ಆರೈಕೆ

ಇದೇ ಸಂದರ್ಭದಲ್ಲಿ ಮಾತನಾಡಿದ ಅಪೊಲೋ ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆ ಬೇರೆ ಆಸ್ಪತ್ರೆಗಳಿಗಿಂತ ಭಿನ್ನವಾಗಿದ್ದು, ಅತ್ಯುತ್ತಮ ತಂತ್ರಜ್ಞಾನದಿಂದ ಕೂಡಿದ ಆರೋಗ್ಯ ಸೇವೆ ನೀಡುವ ಕೇಂದ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕಿ ಸುನೀತಾ ರೆಡ್ಡಿ, ಆಸ್ಪತ್ರೆ ಸಿ.ಇ.ಓ ಡಾ. ನರೇಶ್ ಪರ್ಮಾರ್, ರವೀಂದ್ರಪ್ಪ ಮತ್ತಿತರರು ಇದ್ದರು.

Write A Comment