ಕರ್ನಾಟಕ

ಮೈಸೂರು ವಿವಿಯಿಂದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿಗೆ ಗೌರವ ಡಾಕ್ಟರೇಟ್

Pinterest LinkedIn Tumblr

wiproಮೈಸೂರು,ಮಾ.20- ವಿಪ್ರೋ ಟೆಕ್ನಾಲಿಜಿಸ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಮಾ.22ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಈ ವಿಷಯ ತಿಳಿಸಿದರು.

ಅದೇ ದಿನ ಪ್ರೇಮ್ ಜೀ ಅವರು ಶತಮಾನೋತ್ಸವ ಉಪನ್ಯಾಸ ಸರಣಿಯಲ್ಲಿ ಭಾರತದಲ್ಲಿ ಶಾಲಾ ಶಿಕ್ಷಣವನ್ನು ಉತ್ತಮಗೊಳಿಸುವ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಅಂಚೆ ಇಲಾಖೆ ಹೊರತಂದಿರುವ 5 ಮುಖಬೆಲೆಯ ಅಂಚೆ ಲಕೋಟೆಯನ್ನು ಮಾ.22ರಂದು ಬೆಳಗ್ಗೆ 11 ಗಂಟೆಗೆ ಕ್ರಾಫರ್ಡ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.

ಮೈಸೂರು ವಿವಿಯ ಶತಮಾನೋತ್ಸವ ಸಮಾರಂಭ ಈ ವರ್ಷದ ಇದೇ 27ರಂದು ಮುಕ್ತಾಯ ಸಮಾರಂಭ ನಡೆಯಲಿದ್ದು, ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Write A Comment