ಅಂತರಾಷ್ಟ್ರೀಯ

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ವಿರುದ್ಧ ಹೆಚ್ಚಿದ ಪ್ರತಿಭಟನೆ

Pinterest LinkedIn Tumblr

reನ್ಯೂಯಾರ್ಕ್,ಮಾ.20- ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಪ್ರಾಥಮಿಕ ಆಯ್ಕೆಯಲ್ಲಿ ಮುನ್ನಡೆದಿರುವಂತೆಯೇ ಅವರ ವಿರುದ್ದದ ಪ್ರತಿಭಟನೆಗಳೂ ಹೆಚ್ಚುತ್ತಿವೆ. ನ್ಯೂಯಾರ್ಕ್ ನಗರದ ಅರಿಜೋನಾ ರಸ್ತೆಯಲ್ಲಿ ನೂರಾರು ಮಂದಿ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪೊಲೀಸರು ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರತಿಭಟನಾಕಾರರು ಮ್ಯಾನ್‌ಹಟನ್‌ನಲ್ಲಿರುವ ಕೊಲಂಬಸ್ ವೃತ್ತದಲ್ಲಿ ಜಮಾಯಿಸಿ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನಾಂಗೀಯ ವಾದಿ ಸೆಕ್ಸ್‌ವಾದಿ, ಸಲಿಂಗ ಕಾಮ ವಿರೋಧಿಯಾಗಿರುವ ಡೊನಾಲ್ಡ್ ಟ್ರಂಪ್, ನೀನು ಇಲ್ಲಿಂದ ತೊಲಗು ಎಂದು ಪ್ರತಿಭಟನಾಕಾರರು ಕೂಗಾಡಿದರು.

ಪೊಲೀಸರ ಪ್ರತಿರೋಧದ ನಡುವೆಯೂ ಪ್ರತಿಭಟನೆ ಮುಂದುವರಿಸಿದ ಜನ, ಟ್ರಂಪ್‌ನನ್ನು ಅಮೆರಿಕದಿಂದ ಹೊರ ಕಳುಹಿಸಬೇಕು,ಟ್ರಂಪ್ ಸುತ್ತ ಗೋಡೆ ಕಟ್ಟಬೇಕು ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೊನೆಗೆ ಪೊಲೀಸರು ಹಲವಾರ ಮುಖಂಡರನ್ನು ಬಂಧಿಸಿ ಕರೆದೊಯ್ದರು.

Write A Comment