ಕರ್ನಾಟಕ

ಬಿಬಿಎಂಪಿಗೆ ರು.61.8 ಲಕ್ಷ ಆಸ್ತಿ ತೆರಿಗೆ ಪಾವತಿಸದ ಮಲ್ಯ: ಸಂಸ್ಥೆಗಳಿಗೆ ನೋಟಿಸ್

Pinterest LinkedIn Tumblr

Vijay_Mallya

ಬೆಂಗಳೂರು: ಐಡಿಬಿಐ ಬ್ಯಾಂಕಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪ ಹೊತ್ತಿರುವ ಮಧ್ಯದ ದೊರೆ ವಿಜಯ್ ಮಲ್ಯ, ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಪಾವತಿಸಬೇಕಿದ್ದ ರು.61.8 ಲಕ್ಷ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಕಳೆದ 8 ವರ್ಷಗಳಿಂದ ಯುನೈಟೆಡ್ ಬ್ರುವರೀಸ್ ಹೋಲ್ಡಿಂಗ್ ಲಿಮಿಟೆಡ್(ಯುಬಿಎಚ್ ಎಲ್) ಮತ್ತು ಯುನೈಟೆಡ್ ಬ್ರುವರೀಸ್ ಲಿಮಿಟೆಡ್ ಸಂಸ್ಥೆಗಳು ತೆರಿಗೆ ಪಾವತಿಸಿಲ್ಲ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ತೆರಿಗೆ ಪಾವತಿಸುವಂತೆ ಈ ಎರಡು ಸಂಸ್ಥೆಗಳಿಗೆ ಪಾಲಿಕೆಯ ಪೂರ್ವ ವಲಯದ ಸಹಾಯಕ ಕಂದಾಯ ಅಧಿಕಾರಿ ಜನವರಿ 22ರಂದೇ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಠಲ್ ಮಲ್ಯ ರಸ್ತೆಯಲ್ಲಿರುವ ಮೂರು ಆಸ್ತಿಗಳಿಗೆ ಸಂಬಂಧಿಸಿದಂತೆ ಯುಬಿಎಚ್ ಎಲ್ ರು.55.37 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಯುನೈಟೆಡ್ ಬುರ್ವರೀಸ್ ಲಿಮಿಟೆಡ್ ಪಾಲಿಕೆಗೆ ಒಂದು ಆಸ್ತಿಗೆ ಸಂಬಂಧಿಸಿದಂತೆ ರು.6.44 ಲಕ್ಷ ತೆರಿಗೆ ಪಾವತಿಸಬೇಕಿದೆ. ನೋಟೀಸ್ ಗೆ ಒಂದು ವಾರದೊಳಗೆ ಪ್ರತಿಕ್ರಿಯೆ ಬರಲಿಲ್ಲವೆಂದರೆ, ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment