ಕರ್ನಾಟಕ

ರಜಾ ದಿನದ ಮಜಾ ಸವಿಯಲು ಇಲ್ಲಿವೆ ಐದು ಜಾಗಗಳು

Pinterest LinkedIn Tumblr

10_1ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಆರಂಭ. ಆ ಹೊತ್ತಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬಹು ದಾದ ಕೆಲವು ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.

ಜಾನಪದ ಲೋಕ
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸುಮಾರು 52 ಕಿಮೀ ಸಾಗಿದರೆ ರಾಮನಗರದ ಹತ್ತಿರ ನಿಮಗೊಂದು ವಿಶಿಷ್ಟ ಮತ್ತು ವಿಭಿನ್ನ ಜಗತ್ತು ತೆರೆದು ಕೊಳ್ಳುತ್ತದೆ. ಅದರ ಹೆಸರೇ ಜಾನಪದ ಲೋಕ. ಇಲ್ಲಿ ಜನಪದಕ್ಕೆ ಸಂಬಂಧಿಸಿದ ಎಲ್ಲವೂ ಇವೆ. ಜನಪದ ಹಾಡುಗಳಿವೆ, ಹಳ್ಳಿಯ ಜನಜೀವನ ವಿವರಿಸುವ ವಸ್ತುಗಳಿವೆ, ಹಿಂದಿನ ಕಾಲದಲ್ಲಿ ಹಳ್ಳಿಗರು ಬಳಸುತ್ತಿದ್ದ ಅದೆಷ್ಟೋ ವಸ್ತುಗಳ ಸಂಗ್ರಹ ಇಲ್ಲಿದೆ. ಒಂದು ಪುಟ್ಟ ಹಳ್ಳಿಯೇ ಇಲ್ಲಿ ಜೀವಿಸುತ್ತಿದೆ.

ನಂದನವನ ಪಾರ್ಕು
ಈ ಪಾರ್ಕಿನಲ್ಲಿ ಸುಮಾರು ಹದಿನಾರು ಥರದ ಆಟಗಳಿವೆ. ಒಂದೊಂದು ಆಟ ಆಡುತ್ತಾ ಮಕ್ಕಳು ಸಂಭ್ರಮಿಸುತ್ತಿದ್ದರೆ ನೋಡುವವರಿಗೆ ಕಣ್ಣಿಗೆ ಹಬ್ಬ. ಷ್ಟೇ ಅಲ್ಲ ಸಂಜೆಯಾದರೆ ಇಲ್ಲಿ ಮ್ಯೂಸಿಕ್‌ ಫೌಂಟೇನ್‌ ಶುರುವಾಗುವುದರಿಂದ ಅದನ್ನು ನೋಡಿ ಬೆರಗಾಗುತ್ತಾರೆ.
ನೀರು ನೋಡುತ್ತಾ ಪುಳಕಿತರಾಗ ಬಹುದು. ಮ್ಯೂಸಿಕ್‌ಗೆ ತಕ್ಕಂತೆ ನೀರು ಡಾನ್ಸ್‌ ಮಾಡುವುದನ್ನು ನೋಡಿ ಸಂತೋಷಪಡಬಹುದು.

ಆರ್‌ವಿ ರಸ್ತೆ ಮಕ್ಕಳ ಪಾರ್ಕು
ಎಷ್ಟು ಜನ ಮಕ್ಕಳು ಹೋದರೂ ಅಷ್ಟೂ ಮಕ್ಕಳಿಗೂ ಆಟದ ಸಾಮಾನು ಸಿಗುವ ಪಾರ್ಕು ಎಂಬುದೇ ಇಲ್ಲಿನ ವಿಶೇಷತೆ. ಜಯನಗರದ ನಾಲ್ಕನೇ ಮುಖ್ಯರಸ್ತೆಯ ಪಕ್ಕದಲ್ಲಿರುವ ಈ ಪಾರ್ಕಲ್ಲಿ ಆಟದ ಸಾಮಾನುಗಳಿಗೆ ಹೆಚ್ಚಿನ ಪ್ರಾಧಾನ್ಯತೆ. ಹಾಗಾಗಿ ಮಕ್ಕಳು ಇಲ್ಲಿ ಆಟಾಡಿ ದಣಿಯುತ್ತಾರೆ. ಮಕ್ಕಳ ಪಾರ್ಕಿಗೆ ಸಂಜೆ ನಾಲ್ಕರಿಂದ 9 ಗಂಟೆ ವರೆಗೆ ಮಾತ್ರ ಪ್ರವೇಶ.

ಡಿಫೆನ್ಸ್‌ ಕಾಲನಿ ಮಕ್ಕಳ ಪಾರ್ಕು
ಬೆಂಗಳೂರಿನಲ್ಲಿರುವ ಅತ್ಯಂತ ದೊಡ್ಡ ಪಾರ್ಕುಗಳಲ್ಲಿ ಇದೂ ಒಂದು. ಇಂದಿರಾನಗರದ ಡಿಫೆನ್ಸ್‌ ಕಾಲನಿಯಲ್ಲಿರುವ ಈ ಪಾರ್ಕು ಚೆಂದದ ಮಕ್ಕಳ ಪಾರ್ಕ್‌ ಎಂದೇ ಗುರುತಿಸಲ್ಪ ಡುತ್ತದೆ. ಈ ಪಾರ್ಕಲ್ಲಿ ಮೂರು ವಿಭಾಗಗಳಿದ್ದು ಅದರಲ್ಲಿ ಎರಡು ಭಾಗಗಳಲ್ಲಿ ಮಕ್ಕಳ ಆಟದ ಸಾಮಾನುಗಳೇ ತುಂಬಿಕೊಂಡಿವೆ. ಹಾಗಾಗಿ ಇದೊಂದು ಮಕ್ಕಳ ಲೋಕದಂತೆ ಕಾಣುತ್ತದೆ.
ಸಮಯ: ಬೆಳಿಗ್ಗೆ 8 ರಿಂದ 12. ಮಧ್ಯಾಹ್ನ 3 ರಿಂದ 7
ಎಲ್ಲಿ?: 3ನೇ ಮುಖ್ಯ ರಸ್ತೆ, ಡಿಫೆನ್ಸ್‌ ಕಾಲನಿ, ಇಂದಿರಾನಗರ

ಕುವೆಂಪು ಪಾರ್ಕು
ಬಿಟಿಎಂ ಲೇಔಟಿನಲ್ಲಿರುವ ಸುಂದರವಾದ ಪಾರ್ಕು ಇದು. ಇಲ್ಲಿ ಬಹಳಷ್ಟು ಆಟದ ಸಾಮಾನುಗಳಿಲ್ಲ. ಆದರೆ ಇಲ್ಲಿ ಕೆಲವು ದೊಡ್ಡ ದೊಡ್ಡ ಪ್ರಾಣಿಗಳ ಶಿಲ್ಪಗಳಿವೆ. ಆ ಪ್ರತಿಮೆಗಳು ಮಕ್ಕಳನ್ನು ಆಕರ್ಷಿಸುವುದು ಖಂಡಿತಾ. ಹುಲ್ಲು ಹಾಸಿನ ಮೇಲೆ ಭವ್ಯವಾಗಿ ನಿಂತಿರುವ ಡೈನೋಸಾರ್‌, ಆನೆ, ಜಿರಾಫೆ, ನವಿಲು ಮತ್ತು ಜಿಂಕೆಯ ಪ್ರತಿಮೆಗಳು ಎಲ್ಲಾ ಮಕ್ಕಳನ್ನು ಕೈಬೀಸಿ ಕರೆಯುತ್ತವೆ. ಪುಟ್ಟ ಮಕ್ಕಳು ಅವುಗಳನ್ನು ನೋಡ್ತಾ ಅಚ್ಚರಿಯಾಗುವುದನ್ನು ನೋಡುವುದೇ ಚೆಂದ.
ಎಲ್ಲಿ?: ಬಿಟಿಎಂ ಲೇ ಔಟ್‌ 2 ಸ್ಟೇಜ್‌
ಸಮಯ: ಬೆಳಿಗ್ಗೆ 5 ರಿಂದ 9. ಸಂಜೆ 4 ರಿಂದ 8

-ಉದಯವಾಣಿ

Write A Comment