ರಾಷ್ಟ್ರೀಯ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ರವರ ವ್ಯಂಗ್ಯ ಮಾಡುವ ಅಶ್ಲೀಲ ಚಿತ್ರ ಬಿಡುಗಡೆ :ಆರೋಪಿಗಳು ಸೆರೆ

Pinterest LinkedIn Tumblr

RRSಖರ್ಗೋಂವ್, ಮಾ.18- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ರುಂಡಕ್ಕೆ(ತಲೆ) ಕಂದು ಬಣ್ಣದ ಪ್ಯಾಂಟ್ ಧರಿಸಿದ ಮಹಿಳೆಯ ಮುಂಡ(ದೇಹ)ವನ್ನು ಜೋಡಿಸಿ ಆರ್‌ಎಸ್‌ಎಸ್‌ನ ಪ್ಯಾಂಟ್ ಯೋಜನೆಯನ್ನು ವ್ಯಂಗ್ಯ ಮಾಡುವ ಅಶ್ಲೀಲ ಚಿತ್ರವನ್ನು ಮೊಬೈಲ್‌ಗಳಲ್ಲಿ ಹರಿಯಬಿಟ್ಟಿದ್ದ ಆರೋಪದಡಿ ಮಧ್ಯಪ್ರದೇಶದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತ ಯುವಕರನ್ನು 22 ವರ್ಷದ ಶಕೀರ್ ಹಾಗೂ 20 ವರ್ಷದ ವಾಸೀಮ್ ಎಂದು ಗುರುತಿಸಲಾಗಿದೆ.

ಆರ್‌ಎಸ್‌ಎಸ್ ಸಂಘಟನೆಯು ಖಾಕಿ ಚೆಡ್ಡಿ ಬಿಟ್ಟು ಬ್ರೌನ್ ಪ್ಯಾಂಟ್‌ಗೆ ಬದಲಾಯಿಸಿದ್ದನ್ನು ವ್ಯಂಗ್ಯ ಮಾಡುವ ನಿಟ್ಟಿನಲ್ಲಿ ಬಾಕಾಗಾಂನ್ ಪಟ್ಟಣದಲ್ಲಿ ಈ ಯುವಕರಿಬ್ಬರೂ ಮೋಹನ್ ಭಾಗವತ್ ಅವರ ತಲೆಯನ್ನು ಬ್ರೌನ್ ಪ್ಯಾಂಟ್ ತೊಟ್ಟ ಮಹಿಳೆಯೊಬ್ಬಳ ದೇಹಕ್ಕೆ ಹೊಂದಿಸಿ ಈ ಚಿತ್ರವನ್ನು ತಮ್ಮ ಮೊಬೈಲ್‌ಗಳ ಮೂಲಕ ಹರಿಯಬಿಟ್ಟಿದ್ದು, ಅದು ಎಲ್ಲೆಡೆ ಭಾರೀ ಸುದ್ದಿ ಮಾಡಿತ್ತು. ಇದರ ವಿರುದ್ದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದ್ದವು. ನಮಗೆ ಸಂಘದ ಸದಸ್ಯರಲ್ಲಿ ಕೆಲವರೇ ಈ ಫೋಟೊ ಕಳುಹಿಸಿದ್ದು, ನಾವು ಅದನ್ನು ಫಾರ್‌ವರ್ಡ್ ಮಾಡಿದ್ದೇನಷ್ಟೇ ಎಂದು ಯುವಕರು ಹೇಳಿದ್ದಾರೆ.

Write A Comment